January 30, 2026

Newsnap Kannada

The World at your finger tips!

kushbu 1

ಬಿಜೆಪಿ ನಾಯಕಿ ಖುಷ್ಬೂ ಕಾರು ಅಪಘಾತ – ಪ್ರಾಣಾಪಾಯದಿಂದ ಪಾರು

Spread the love

ಇತ್ತೀಚೆಗಷ್ಟೆ ಬಿಜೆಪಿ ಸೇರಿದ ಬಿಜೆಪಿ ನಾಯಕಿ ಹಾಗೂ ನಟಿ ಖುಷ್ಬೂ ಸುಂದರ್‌ ಅವರ ಕಾರು ಅಪಘಾತಕ್ಕೀಡಾಗಿದೆ.

ಈ ಘಟನೆ ಮೆಲ್ಮರುವಾತೂರ್ ಪಟ್ಟಣದ ಬಳಿ ನಡೆದಿದ್ದು, ಲಾರಿಯೊಂದು ಖುಷ್ಬೂ ಸುಂದರ್ ಕಾರಿಗೆ ಡಿಕ್ಕಿ ಹೊಡೆದಿದೆ. ಇನ್ನು ಅಪಘಾತದ ತೀವ್ರತೆಗೆ ಖುಷ್ಬೂ ಅವರ ಕಾರಿನ ಒಂದು ಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿರುವ ಖೂಷ್ಬೂ ಬಿಜೆಪಿ ಆಯೋಜಿಸಿರುವ ವೇಲ್‌ ಯಾತ್ರೆಗೆ ತೆರಳುತ್ತಿರುವಾಗ ಏಕಾಏಕಿ ಬಂದ ಟ್ರಕ್‌ವೊಂದು ನನ್ನ ಕಾರಿಗೆ ಡಿಕ್ಕಿ ಹೊಡೆದಿದೆ. ನಾವು ಸರಿಯಾದ ಪಥದಲ್ಲಿ ಚಲಿಸುತ್ತಿದ್ದ ವೇಳೆ ಲಾರಿ ಬಂದು ಡಿಕ್ಕಿ ಹೊಡೆದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ಹಿಂದೆ ಏನಾದರೂ ಪಿತೂರಿ ಇದಿಯಾ? ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. 

ಅಲ್ಲದೇ ಘಟನೆಯಿಂದ ತನಗೆ ಯಾವುದೇ ಸಮಸ್ಯೆಯಾಗಿಲ್ಲ. ದೇವರ ಆಶೀರ್ವಾದಿಂದ ನನಗೆ ಏನು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ. ಬಿಜೆಪಿ ನಾಯಕಿ ಖುಷ್ಬೂ ಅಪಘಾತದ ವೇಳೆ ಕಡ್ಡಲೂರ್‌ಗೆ ಬಿಜೆಪಿಯ ವೇಲ್‌ ಯಾತ್ರೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. 

ವೇಲ್‌ ಯಾತ್ರೆ ಒಂದು ತರಹದ ರ‍್ಯಾಲಿಯಾಗಿದ್ದು ಮುಂದಿನ ವರ್ಷದ ವಿಧಾನಸಭೆ ಚುನಾವಣೆ ಹಿನ್ನೆಲೆ ಈಗೀನಿಂದಲೇ ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದೆ

error: Content is protected !!