ಚಂದನವನದ ಚಿತ್ತಾರದ ಚಲುವೆ ನಟಿ ಅಮೂಲ್ಯ ಬಿಜೆಪಿ ಪಕ್ಷಕ್ಕೆ ಸಚಿವ ಸಿ.ಟಿ. ರವಿ ಅವರ ಸಮ್ಮುಖದಲ್ಲಿ ಸೇರ್ಪಡೆಗೊಂಡಿದ್ದಾರೆ.
ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯಕ್ರಮ ಸಿ.ಟಿ. ರವಿ ಅಮೂಲ್ಯ ಅವರಿಗೆ ಸೂಕ್ತ ಸ್ಥಾನ ನೀಡುವುದು ಭರವಸೆ ಕೊಟ್ಟಿದ್ದಾರೆ.
ಅಮೂಲ್ಯ ನಿನ್ನೆ ತಮ್ಮ ರಾಜ ರಾಜೇಶ್ವರಿ ನಗರದ ನಿವಾಸದಲ್ಲಿ ಬಿಜೆಪಿ ಸೇರ್ಪಡೆಗೊಂಡಿದೆ. ಅಮೂಲ್ಯ ಜೊತೆ ಅವರ ಪತಿ ಜಗದೀಶ್, ಹಾಗೂ ಮಾವ, ರಾಜ ರಾಜೇಶ್ವರಿ ನಗರದ ಮಾಜಿ ಕಾರ್ಪೋಟರ್ ಜಿ.ಹೆಚ್. ರಾಮಚಂದ್ರ ಅವರೂ ಸಹ ಬಿಜೆಪಿ ಪಕ್ಷಕ್ಕೆ ಸಚಿವ ಸಿ.ಟಿ. ರವಿ ಅವರ ಸಮ್ಮುಖದಲ್ಲಿ ಸೇರಿದ್ದಾರೆ.
ಕಳೆದ ಬಾರಿಯ ವಿಧಾನಸಭಾ ಚುಣಾವಣೆಯಲ್ಲಿ ಮಾವ ಜಿ.ಹೆಚ್. ರಾಮಚಂದ್ರ ಜೆಡಿಎಸ್ ಮುಖೇನ ಸ್ಪರ್ಧಿಸಿದ್ದಾಗ, ಅಮೂಲ್ಯ ಮಾವನ ಪರ ಪ್ರಚಾರ ಮಾಡಿದ್ದರು. ಆದರೆ ರಾಮಚಂದ್ರ ಚುಣಾವಣೆಯಲ್ಲಿ ಸೋತ ನಂತರ ರಾಜಕೀಯ ಚಟುವಟಿಕೆಗಳಲ್ಲಿ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ.
ಮದುವೆಯ ಬಳಿಕ ಚಿತ್ರರಂಗವನ್ನು ತೊರೆದು ಅಶಕ್ತರು, ಬಡ ಮಕ್ಕಳಿಗೆ ಅಗತ್ಯ ವಸ್ತುಗಳ ಪೂರೈಕೆಯಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಅಮೂಲ್ಯ ಪೂರ್ಣ ಪ್ರಮಾಣದ ರಾಜಕೀಯಕ್ಕೆ ಇಳಿಯಲು ಬಿಜೆಪಿ ಪಕ್ಷ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
More Stories
ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ