November 16, 2024

Newsnap Kannada

The World at your finger tips!

WhatsApp Image 2022 06 09 at 8.21.30 AM

ರಾಜ್ಯಸಭೆ ಚುನಾವಣೆ : ಲೇಹರ್ ಸಿಂಗ್ ಗೆಲುವಿನ ಬಿಜೆಪಿ ಲೆಕ್ಕಾಚಾರ ಹೇಗೆ ಹಾಕಿದೆ : ವಿವರ ನೋಡಿ

Spread the love

ರಾಜ್ಯಸಭೆ ಬಿಜೆಪಿ ಮೂರನೇ ಅಭ್ಯರ್ಥಿ ಲೇಹರ್ ಸಿಂಗ್ ಗೆಲುವಿನ ಲೆಕ್ಕಾಚಾರದ ಕುತೂಹಲ ಹೆಚ್ಚಾಗಿದೆ, ಈ ಬಗ್ಗೆ ಬಿಜೆಪಿ ಭರ್ಜರಿ ಲೆಕ್ಕಾಚಾರ ಹಾಕಿದೆ. ಸಂಖ್ಯೆ 19 ರಲ್ಲಿ ಅಭ್ಯರ್ಥಿ ಲೆಹರ್ ಸಿಂಗ್ ಗೆಲುವಿನ ಗೌಪ್ಯತೆ ಅಡಗಿದೆ.

ಸಂಖ್ಯೆ 19ರ ಆಧಾರದಲ್ಲಿ ಮೂರನೇ ಅಭ್ಯರ್ಥಿ ಗೆಲುವಿಗೆ ಬಿಜೆಪಿ ರಣತಂತ್ರ ರೂಪಿಸಿದೆ. ಲೆಕ್ಕಾಚಾರದ ಗುಟ್ಟೇನು ? :

1) ಬಿಜೆಪಿ ಬಳಿ ಇರುವ ಶಾಸಕರ ಸಂಖ್ಯೆ 122. ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್ ತಲಾ 45 ಶಾಸಕರಿಂದ ಮೊದಲ ಪ್ರಾಶಸ್ತ್ಯ ಮತ ಹಾಕಿಸಲು ತೀರ್ಮಾನ ಮಾಡಲಾಗಿದೆ

2) ಒಬ್ಬ ಶಾಸಕನ 1 ಮತ 100 ಮತಗಳ ಮೌಲ್ಯಕ್ಕೆ ಸಮ. ಈ‌ ಲೆಕ್ಕಾಚಾರದಲ್ಲಿ 45 ಮತಗಳು ಅಂದರೆ 4,500 ಮತಗಳ ಮೌಲ್ಯ ಆಗಲಿದೆ. ಆದರೆ ಒಬ್ಬ ರಾಜ್ಯಸಭೆ ಅಭ್ಯರ್ಥಿ ಗೆಲ್ಲುವುದಕ್ಕೆ ಕರಾರುವಕ್ಕಾಗಿ ಬೇಕಾಗುವ ಮತಗಳ ಮೌಲ್ಯ 4,481.

3) ಮೊದಲೆರಡು ಅಭ್ಯರ್ಥಿಗಳಿಗೆ ಚಲಾವಣೆಯಾದ ಒಟ್ಟು 4,500 ಮತ ಮೌಲ್ಯಗಳಲ್ಲಿ 4,481 ಕಳೆದರೆ ಉಳಿಯುವು ಸಂಖ್ಯೆ 19. ಅಲ್ಲಿಗೆ ನಿರ್ಮಲಾ ಸೀತಾರಾಮನ್ 4,481 ಮತ್ತು ಜಗ್ಗೇಶ್‌ ಅವರಿಗೆ 4,481 ಮತ ಮೌಲ್ಯಗಳು ಸಿಕ್ಕಿದ ಮೇಲೆ ಅವರಿಬ್ಬರ ಗೆಲುವು ಖಚಿತ.

4) ಇವರಿಬ್ಬರಿಂದ ಉಳಿಯುವ 19+19 ಅಂದರೆ 38 ಮತಗಳು ಲೆಹರ್ ಸಿಂಗ್ ಗೆಲ್ಲಿಸಲು ಸಹಕಾರಿ ಆಗಲಿವೆ ಎನ್ನುವುದು ಸಧ್ಯದ ಲೆಕ್ಕಾಚಾರ

5) ಬಿಜೆಪಿಯ ಬಳಿ 32 ಉಳಿಕೆ ಮತಗಳು ಈಗಾಗಲೇ ಇದೆ. 32 ಮತಗಳು ಅಂದ್ರೆ ಮತಗಳ‌ ಮೌಲ್ಯ 3,200. 3,200ಕ್ಕೆ 38 ಕೂಡಿಸಿದರೆ 3,238 ಆಗಲಿದೆ.

6) ಜೆಡಿಎಸ್ ಅಭ್ಯರ್ಥಿಗೆ 32 ಮತ್ತು ಕಾಂಗ್ರೆಸ್ ಎರಡನೇ ಅಭ್ಯರ್ಥಿಗೆ 25 ಮೊದಲ ಪ್ರಾಶಸ್ತ್ಯದ ಮತಗಳು ಸಿಕ್ಕಿರುತ್ತವೆ.

ಇದನ್ನು ಓದಿ –ರೆಪೋ ದರ ಹೆಚ್ಚಳ- ಗೃಹ , ವೈಯಕ್ತಿಕ ಸಾಲದ ಬಡ್ಡಿ ದರ ಶೇ.4.90ಕ್ಕೆ ಏರಿಕೆ, EMI ಕೂಡ ದುಬಾರಿ

7) ಮತಗಳ ಎಣಿಕೆಯಲ್ಲಿ ಕನಿಷ್ಟ ಮತಗಳನ್ನು ಪಡೆದಿರುವ ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಎಣಿಕೆಯಿಂದ ಎಲಿಮಿನೇಟ್ ಮಾಡಲಾಗುತ್ತದೆ.

8) ಆಗ ಕಣದಲ್ಲಿ ಬಿಜೆಪಿಯ ಲೆಹರ್ ಸಿಂಗ್ ಮತ್ತು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಉಳಿದಿರುತ್ತಾರೆ. ಲೆಹರ್ ಸಿಂಗ್‌ಗೆ 3,238 ಕುಪೇಂದ್ರ ರೆಡ್ಡಿಗೆ 3,200 ಮತಗಳ ಮೌಲ್ಯ ಸಿಕ್ಕಿರುತ್ತದೆ. ಮತಗಳ ಮೌಲ್ಯದಲ್ಲಿ ಲೆಹರ್ ಸಿಂಗ್ ಮುಂದಿರುತ್ತಾರೆ. ಆಗ ಸಹಜವಾಗಿ ಹೆಚ್ಚು ಮತಗಳ ಮೌಲ್ಯಗಳ ಪಡೆದ ಲೆಹರ್ ಸಿಂಗ್ ರಾಜ್ಯಸಭೆಗೆ ಆಯ್ಕೆ ಆಗುತ್ತಾರೆ.

Copyright © All rights reserved Newsnap | Newsever by AF themes.
error: Content is protected !!