December 19, 2024

Newsnap Kannada

The World at your finger tips!

ED , high court , DKS

Another shock to DKS from ED: call on Oct 7thಡಿ.ಕೆ. ಶಿಗೆ ಮತ್ತೊಂದು ಶಾಕ್ ನೀಡಿದ ಇಡಿ : ಅ. 7 ರಂದು ವಿಚಾರಣೆಗೆ ಬನ್ನಿ

ಬಿಜೆಪಿ 15 ಸ್ಥಾನವಂತೆ : ಮಿಕ್ಕಿದ್ದು ನಮಗೆ – ಪಾಲಿಗೆ ಬಂದಿದ್ದು ಪಂಚಾಮೃತ – ಡಿಕೆಶಿ

Spread the love

ಬಿಜೆಪಿಯವರಿಗೆ 15 ಸ್ಥಾನ ಬೇಕು ಅಷ್ಟು ಇಟ್ಟುಕೊಂಡು ಮಿಕ್ಕಿದ್ದು ನಮಗೆ ಬಿಟ್ಟಿದ್ದಾರೆ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಎಸ್‍ವೈ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.

ಪರಿಷತ್ ಚುನಾವಣೆಯಲ್ಲಿ 15 ಸ್ಥಾನ ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಉಳಿದ ಸ್ಥಾನ ನಾವು ಗೆಲ್ಲುತ್ತೇವೆ ಬಿಡಿ ಎಂದಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಾವಣೆ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ವರ್ಚೂವಲ್ ಮೂಲಕ ಸದಸ್ಯತ್ವ ನೋಂದಾವಣೆಗೆ ಚಾಲನೆ ನೀಡಿದ್ದೇವೆ. ಒಟ್ಟು ರಾಜ್ಯದ 2 ಸಾವಿರ ಸ್ಥಳಗಳಲ್ಲಿ ಸದಸ್ಯತ್ವ ನೋಂದಾವಣೆ ಏಕ ಕಾಲದಲ್ಲಿ ಆಗುತ್ತಿದೆ ಎಂದರು.

ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾಗುವ ವಿಚಾರವಾಗಿ ಮಾತನಾಡಿ, ಬಿಜೆಪಿಯವರು ಎರಡು ಪ್ಲಾನ್ ಹೊಂದಿದ್ದಾರೆ. ಒಂದು ಅಫೀಶಿಯಲ್ ಆಗಿ ಕಾಯ್ದೆ ಜಾರಿ ಮಾಡೋದು. ಎರಡನೇಯದ್ದು ಖಾಸಗಿ ಮಸೂದೆ ಮಂಡನೆ ಮಾಡೋಡು. ಈ ಎರಡು ಪ್ಲಾನ್ ಮಾಡಿಕೊಂಡಿರುವ ಬಿಜೆಪಿ ಈ ಬಿಲ್‍ಗಳನ್ನು ಮೂವ್ ಮಾಡಲು ಹೊರಟಿದೆ ಎಂದಿದ್ದಾರೆ

ಮತಾಂತರ ಕಾಯ್ದೆ ಪಾಸ್ ಮಾಡಿಕೊಳ್ಳಲು ಹೊರಟರೆ ಅದು ಪೊಲಿಟಿಕಲಿ ಎಫೆಕ್ಟ್ ಅಗುತ್ತದೆ. ಇದು ಕೇವಲ ರಾಜ್ಯಕ್ಕೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ಇದು ಅಂತರಾಷ್ಟ್ರೀಯ ವಿಷಯವಾಗಿದೆ. ಇಡೀ ಪ್ರಪಂಚವೇ ರಾಜ್ಯದಲ್ಲಿ ಇಂತಹಾ ಕೆಲಸ ಆಗುತ್ತಿದೇಯೆ ಎಂದು ಪ್ರಶ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Copyright © All rights reserved Newsnap | Newsever by AF themes.
error: Content is protected !!