ನಮಗೂ ಮಂಡ್ಯಕ್ಕೂ ಜನ್ಮ ಜನ್ಮದ ಅನುಬಂಧ – ಎಚ್ ಡಿ ಕುಮಾರಸ್ವಾಮಿ

Team Newsnap
2 Min Read

ಮಂಡ್ಯ ಜಿಲ್ಲೆಗೂ ನಮಗೂ ಯಾವುದೋ ಜನುಮ ಜನುಮದ ಅನುಬಂಧ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಶುಕ್ರವಾರ ಹೇಳಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ನಿಖಿಲ್ ಚುನಾವಣೆಯಲ್ಲಿ ಮಂಡ್ಯ ಜನ ಮೋಸ ಮಾಡಲಿಲ್ಲ. ಬದಲಿಗೆ ಕಾಂಗ್ರೆಸ್, ಬಿಜೆಪಿ, ರೈತಸಂಘ ಎಲ್ಲರೂ ಸೇರಿ ನಮ್ಮನ್ನು ಮುಗಿಸುವ ಪ್ಲಾನ್ ಮಾಡಿ ಸೋಲಿಸಿದರು ಎಂದರು.

ಮಂಡ್ಯ ಜನ ನನ್ನ ಹೃದಯದಲ್ಲಿದ್ದಾರೆ.ನನ್ನ ದೇಹ ಮಣ್ಣುಸೇರೋವರೆಗೂ ಈ ಜಿಲ್ಲೆಯ ಕಷ್ಟಕ್ಕೆ ನೆರವಾಗುತ್ತೇನೆ.ನಿಖಿಲ್ ಈಗ ಸೋತಿರಬಹುದು, ಮುಂದೆ ಮಂಡ್ಯ ಜನರೇ ಒಪ್ಪಿ ಲೋಕಸಭೆಗೆ ಹೋಗಬಹುದು ಎಂದು ವಿಶ್ವಾಸದಿಂದ ಹೇಳಿದರು.

ಎನ್ ಕಿತ್ತು ಗುಡ್ಡೆ ಹಾಕಿದ್ದಾನೆ?

ಸಚಿವ ನಾರಾಯಣಗೌಡ ಕಾರ್ಯವೈಖರಿಗೂ ಎಚ್ಡಿಕೆ ಆಕ್ಷೇಪ ವ್ಯಕ್ತಪಡಿಸಿ ಈತ ಸಚಿವನಾಗಿ ಏನ್ ಕಿತ್ತು ಗುಡ್ಡೆಹಾಕಿದ್ದಾನೆ ಎಂದು ಪ್ರಶ್ನೆ ಮಾಡಿದರು.

ನಾನು ಸಿಎಂ ಆಗಿದ್ದಾಗ ಹಣ ಬಿಡುಗಡೆ ಮಾಡಿ ಕೆಲಸ ಆರಂಭ ಮಾಡಿದ್ದೆವು.
ನನ್ನ ಮತ್ತು ನಮ್ಮ‌ಕುಟುಂಬದ ಬಗ್ಗೆ ಮಾತಾಡೋವ ಹಂತಕ್ಕೆ ಆತ ಬಂದಿದ್ದಾನೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಹೇಳಿದಿಷ್ಟು.

  • ಗ್ರಾಮ ಪಂಚಾಯತಿ ಚುನಾವಣೆ ಯಿಂದ ಪಕ್ಷದ ಬಲವನ್ನು ತಿಳಿಯೋಕೆ ಆಗಲ್ಲ. ಗ್ರಾಮ‌ ಪಂಚಾಯತಿ ಚುನಾವಣೆ ಪಕ್ಷದ ಚಿಹ್ನೆ ಮೇಲೆ ನಡೆಯಲ್ಲ. ತಾ.ಪಂ ಜಿ.ಪಂ ಚುನಾವಣೆಗಳು‌ ಚಿಹ್ನೆ ಮೇಲೆ ನಡೆಯೋದು ಆ ಚುನಾವಣೆಯಲ್ಲಿ ಪಕ್ಷದ ಬಲ ತಿಳಿಯುತ್ತದೆ.
  • ಬಸವಕಲ್ಯಾಣ, ಮಸ್ಕಿ ಚುನಾವಣೆಯಲ್ಲಿ ಅಭ್ಯರ್ಥಿ ಹಾಕಲು ಆಸಕ್ತಿ ಇಲ್ಲ. ಅಲ್ಲಿನ ಕಾರ್ಯಕರ್ತರು ಅಭ್ಯರ್ಥಿ ಹಾಕಬೇಕು ಎನ್ನುತ್ತಿದ್ದಾರೆ ತೀರ್ಮಾನ ಮಾಡಿ ಅಭ್ಯರ್ಥಿ ಹಾಕೋ ಬಗ್ಗೆ ಸಭೆ ಮಾಡುತ್ತೇವೆ.
  • ಬಸವಕಲ್ಯಾಣದಲ್ಲಿ ನಾವು ಮೂರು ಬಾರಿ ಗೆದ್ದಿದ್ದೇವೆ. ಅಲ್ಲಿ ನಮ್ಮದೇ ಆದ ಅಸ್ತಿತ್ವ ಇದೆ , ಸಭೆ ನಡೆಸಿ ಅಭ್ಯರ್ಥಿ ಹಾಕೋದರ ಬಗ್ಗೆ ತೀರ್ಮಾನ ಮಾಡುತ್ತೇವೆ.
  • ಸಿದ್ದರಾಮಯ್ಯ ಹೇಳ್ತಾರೆ ಜೆಡಿಎಸ್ ನಂಬಿ ಹಾಳಾದೆವು ಎಂದು ಮಂಡ್ಯದಲ್ಲಿ ಯಾರ ನಂಬಿ ಹಾಳಾದೆವು ಅನ್ನೋದು ನಮಗೆ ಗೊತ್ತು
  • ಕಾಂಗ್ರೆಸ್ ನವರು ಬಿಜೆಪಿ ಜೊತೆ ಎಷ್ಟೋ ಸ್ಥಳೀಯ ಸಂಸ್ಥೆಗಳಲ್ಲಿ‌ ಒಂದಾಗಿದ್ದಾರೆ. ಯಾರು ಸ್ವಚ್ಚವಾಗಿ ರಾಜಕಾರಣ ಮಾಡುತ್ತಿಲ್ಲ.
  • ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಗ್ರಾಮ ಸ್ವರಾಜ್ಯ ಹೆಸರಿನಲ್ಲಿ ಮೂರು ನಾಲ್ಕು ಮಂದಿ ಸಚಿವರು‌ ಎಲ್ಲಾ ತಾಲೂಕಿಗೆ ಹೋಗುತ್ತಿದ್ದಾರೆ. ಬಿಜೆಪಿ ಮಂತ್ರಿಗಳು ಗ್ರಾಪಂ ಚುನಾವಣೆ ಹಿನ್ನೆಲೆ ಹಳ್ಳಿಗೆ ಹೋಗ್ತಾ ಇದ್ದಾರೆ. ತಮ್ಮ‌ ಪಕ್ಷವನ್ನು ಕಟ್ಟಲು ಈ ಕಾರ್ಯಕ್ರಮ ಮಾಡ್ತಾ ಇದ್ದಾರೆ.
  • ಪಕ್ಷದ ಸಂಘಟನೆಯ ಜೊತೆಗೆ ನಾಲ್ಕು ಗ್ರಾಮಗಳಿಗೆ ಭೇಟಿ ನೀಡಬೇಕು. ರೈತರ ಸಮಸ್ಯೆಯನ್ನು ಆಲಿಸಬೇಕು. ಕೇವಲ ಪಕ್ಷ ಸಂಘಟನೆಯನ್ನು ಮಾತ್ರ ಮಾಡಬಾರದು .ಮಳೆ ಅವಾಂತರವಾದಾಗ ಮಂತ್ರಿಗಳು ಗ್ರಾಮಗಳಿಗೆ ಭೇಟಿ ನೀಡಲಿಲ್ಲ.
Share This Article
Leave a comment