ಟಾಲಿವುಡ್ ನಟ ಚಿರಂಜೀವಿ ಕುಟುಂಬದ ಅಳಿಯ, ತೆಲುಗು ನಟ ಸಾಯಿಧರ್ಮ ತೇಜ್ ಬೈಕ್ ಕಳೆದ ರಾತ್ರಿ ಭೀಕರವಾಗಿ ಸ್ಕಿಡ್ ಆಗಿ ಸಂಭವಿಸಿದ ಅಪಘಾತದಲ್ಲಿ ಸ್ಥಿತಿ ಗಂಭೀರವಾಗಿದೆ.
ನಿನ್ನೆ ರಾತ್ರಿ 8.30ರ ಸುಮಾರಿಗೆ ಸಾಯಿಧರ್ಮ ತೇಜ್ ಹೈದ್ರಾಬಾದ್‍ನ ಮಾದಾಪುರ್ ಕೇಬಲ್ ಬ್ರಿಡ್ಜ್ ಬಳಿ ಸ್ಪೋರ್ಟ್ಸ್ ಬೈಕ್‍ನಲ್ಲಿ ಬರುವಾಗ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಪಿಟ್ಸ್ ಬಂದು ಕೋಮಾ ಸ್ಥಿತಿಗೆ ಬಂದಿದ್ದಾರೆ. ವೈದ್ಯರು ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟಿದ್ದಾರೆ.
ಸಾಯಿಧರ್ಮ ತೇಜ್ ಬಲಗಣ್ಣು ಹಾಗೂ ಎದೆ ಭಾಗ, ಭುಜ, ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಸದ್ಯ ಹೈದ್ರಾಬಾದ್‍ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್, ಅಲ್ಲು ಅರವಿಂದ್ ಸೇರಿದಂತೆ ಇಡೀ ಕುಟುಂಬವೇ ಆಸ್ಪತ್ರೆಯಲ್ಲಿದ್ದಾರೆ. ಇತ್ತ ಅಭಿಮಾನಿಗಳು ಕಂಗಾಲಾಗಿದ್ದಾರೆ. ಕುಟುಂಬಸ್ಥರು ಆತಂಕ ಪಡುವ ಅಗತ್ಯವಿಲ್ಲ. ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಬೈಕ್ ಸ್ಕಿಡ್ ಆಗಿ ಅಪಘಾತವಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಲಗಣ್ಣು, ಬಲಭಾಗದ ಎದೆಗೆ ಗಾಯಗಳಾಗಿದ್ದು, ಭುಜದ ಮೂಳೆ ಮುರಿದಿದೆ. ಮೆದುಳು ಹಾಗೂ ಇತರ ಸೂಕ್ತ ಭಾಗಕ್ಕೆ ಯಾವುದೇ ರೀತಿಯ ಪೆಟ್ಟು ಬಿದ್ದಿಲ್ಲ. ಸದ್ಯ ಕೋಮಾದಲ್ಲಿದ್ದಾರೆ, 24 ಗಂಟೆ ನಿಗಾವಹಿಸಲಾಗಿದೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
ಬಿಗ್ ಬಾಸ್ ತೆಲುಗು ಗೆದ್ದ ಮೈಸೂರಿನ ನಿಖಿಲ್ ಮಳಿಯಕ್ಕಲ್
ವಿಶ್ವದಾಖಲೆ ತಬಲಾ ವಾದಕ ಉಸ್ತಾದ್ ಜಾಕಿರ್ ಹುಸೇನ್ ವಿಧಿವಶ
ಕಾಲ್ತುಳಿತದಲ್ಲಿ ಮಹಿಳೆ ಸಾವು: ನಟ ಅಲ್ಲು ಅರ್ಜುನ್ ಬಂಧನ