ಬಿಹಾರ ವಿಧಾನಸಭಾ ಚುನಾವಣೆ ಪ್ರಚಾರದ ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಧುಮಕಿದ್ದಾರೆ.
ಕೊರೊನಾ ಅತಂಕದ ನಡುವೆಯೂ ಮೂರು ರ್ಯಾಲಿಗಳಲ್ಲಿ ಪ್ರಧಾನಿ ಮೋದಿ ಪ್ರಚಾರ ಭಾಷಣಕ್ಕೆ ವೇದಿಕೆ ಸಿದ್ಧವಾಗಿದೆ.
ಅತಿ ಹೆಚ್ಚು ಹಿಂದುಳಿದ ವರ್ಗದ ಮತಗಳಿರುವ ಸಸಾರಾಮ್‌ನಲ್ಲಿ ಮೋದಿ ಭಾಷಣ ಮಾಡಿ ಬಿಜೆಪಿ ಪರ ಮತ ಯಾಚಿಸಿದ್ದಾರೆ.
ಸಾರ್ವಜನಿಕ ರ್‍ಯಾಲಿ ಉದ್ದೇಶಿಸಿ ಭಾಷಣ ಮಾಡಿದ ನರೇಂದ್ರ ಮೋದಿ, ಬಿಹಾರ ಎಂದಿಗೂ ಕೆಚ್ಚೆದೆಯ ಹೋರಾಟಕ್ಕೆ ತುಂಬಾ ಫೇಮಸ್. ಬಿಹಾರದ ಯೋಧರು ಗಲ್ವಾನ್ ಕಣಿವೆಯಲ್ಲಿ ಚೀನಾ ಜತೆ ಹೋರಾಡಿ ಹುತಾತ್ಮರಾಗಿದ್ದಾರೆ. ಪುಲ್ಮಾಮಾ ದಾಳಿಯಲ್ಲಿ ಯೋಧರು ಹುತಾತ್ಮರಾಗಿದ್ದಾರೆ. ಆದರೂ ದೇಶ ಕಾಯುವ ಮೂಲಕ, ಭಾರತ ಮಾತೆಯನ್ನು ರಕ್ಷಿಸುವ ಕಾಯಕದಲ್ಲಿ ಯಶಸ್ವಿಯಾಗಿದ್ದಾರೆ. ದೇಶದ ಹಾಗೂ ಬಿಹಾರ ರಾಜ್ಯದ ಗೌರವ ಹೆಚ್ಚಿಸಿದ್ದಾರೆ ಎಂದು ಮೋದಿ ಹೇಳಿದರು.
ಕೇಂದ್ರ ಸರಕಾರ ಇತ್ತೀಚೆಗೆ ಕೃಷಿ ಕಾಯಿದೆ ಜಾರಿಗೆ ತಂದಿದೆ. ಇದರಿಂದ ದಲ್ಲಾಳಿಗಳನ್ನು, ಮಧ್ಯವರ್ತಿಗಳನ್ನು ತಪ್ಪಿಸುವುದು ಸಾಧ್ಯವಾಗಿದೆ. ಆದರೆ ಪ್ರತಿಪಕ್ಷಗಳು ಇವುಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅವರು ಮಧ್ಯವರ್ತಿಗಳ ಪರವಾಗಿಯೇ ಮಧ್ಯಸ್ಥಿಕೆ ವಹಿಸುತ್ತಿದ್ದಾರೆ ಎಂದು ಮೋದಿ ಕಿಡಿಕಾರಿದರು.
ಚುನಾವಣೆ ಪ್ರಚಾರ ಭಾಷಣ ಆರಂಭಕ್ಕೂ ಮುನ್ನ ಪ್ರಧಾನಿ ಮೋದಿ, ರಾಮ್ ವಿಲಾಸ್ ಪಾಸ್ವಾನ್ ಮತ್ತು ರಘುವಂಶ್ ಪ್ರಸಾದ್ ಅವರನ್ನು ಸ್ಮರಿಸಿದರು.
ಕೊರೊನಾ ಮಹಾಮಾರಿ ಇಡೀ ವಿಶ್ವ, ದೇಶದಲ್ಲಿ ಸಮಸ್ಯೆ ತಂದೊಡ್ಡಿದಾಗ, ಬಿಹಾರ ಅತ್ಯಂತ ಮುನ್ನೆಚ್ಚರಿಕೆ ಹಾಗೂ ನಿಯಂತ್ರಣಕ್ಕೆ ಒತ್ತು ನೀಡಿತು. ಇದರಿಂದ ಕೊರೊನಾ ಮಹಾಮಾರಿ ಇಲ್ಲಿ ಸ್ವಲ್ಪ ತಗ್ಗಿದೆ. ಇದಕ್ಕೆ ಬಿಹಾರ ಸರಕಾರಕ್ಕೆ ಅಭಿನಂದನೆಗಳು ಎಂದು ನರೇಂದ್ರ ಮೋದಿ ಶ್ಲಾಘಿಸಿದರು.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ