Main News

ಬಿಹಾರ ಚುನಾವಣೆ; ಎನ್​ಡಿಎಗೆ ತುಸು ಮೇಲುಗೈ

ಬಿಹಾರ ರಾಜ್ಯದ 243 ಕ್ಷೇತ್ರಗಳ ವಿಧಾನಸಭಾ ಚುನಾವಣೆಯಲ್ಲಿ ಎನ್​ಡಿಎ ಮತ್ತು ಮಹಾಘಟಬಂಧನ್ ಮೈತ್ರಿಕೂಟದ ಮಧ್ಯೆ ಬಿರುಸಿನ ಪೈಪೋಟಿ ನಡೆದಿದೆ.

ಮತ ಎಣಿಕೆಯ ಆರಂಭದಿಂದಲೂ ಹೆಚ್ಚೂಕಡಿಮೆ ಸಮಾನವಾಗಿ ಮುನ್ನಡೆ ಸ್ಥಿತಿ ಹೊಂದಿವೆ.  ಈವರೆಗೆ 243 ಕ್ಷೇತ್ರಗಳ ಪೈಕಿ 242 ಕ್ಷೇತ್ರಗಳಲ್ಲಿ ಮತ ಎಣಿಕೆ ಮಾಹಿತಿ ಬಂದಿದ್ದು, ಎನ್​ಡಿಎ ಮೈತ್ರಿಕೂಟ 121 ಕಡೆ ಮುನ್ನಡೆ ಹೊಂದಿದರೆ, ಮಹಾಘಟಬಂಧನ್ 112 ಕಡೆ ಮುನ್ನಡೆ ಪಡೆದಿದೆ. ಮಧ್ಯಾಹ್ನದಷ್ಟರಲ್ಲಿ ಬಹುತೇಕ ಫಲಿತಾಂಶ ಹೊರಬೀಳಲಿದೆ.

ಎನ್​ಡಿಎ ಮೈತ್ರಿಕೂಟದಲ್ಲಿ ಜೆಡಿಯುಗಿಂತ ತುಸು ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಮಹಾಘಟಬಂಧನದಲ್ಲಿ ನಿರೀಕ್ಷೆಯಂತೆ ಆರ್​ಜೆಡಿ ಭರ್ಜರಿ ಮುನ್ನಡೆ ಗಳಿಸಿದೆ. ಎಡಪಕ್ಷಗಳೂ ಕೂಡ ತಮ್ಮ ಅಸ್ತಿತ್ವವನ್ನು ಜೋರಾಗಿಯೇ ತೋರಿಸುತ್ತಿವೆ. ಒಟ್ಟಾರೆ ಪಕ್ಷಾವಾರು ಲೆಕ್ಕ ತೆಗೆದುಕೊಂಡಾಗ ಆರ್​ಜೆಡಿ ಮೊದಲ ಸ್ಥಾನದಲ್ಲಿದೆ. ಬಿಜೆಪಿ ಮತ್ತು ಜೆಡಿಯು ನಂತರದ ಸ್ಥಾನಗಳಲ್ಲಿವೆ. 

ಇದೇ ವೇಳೆ, ಹಲವಾರು ಕಾರಣಕ್ಕೆ ಬಿಹಾರ ಚುನಾವಣೆ ರಾಷ್ಟ್ರವ್ಯಾಪಿ ಕುತೂಹಲ ಮೂಡಿಸಿದೆ. ಎನ್​ಡಿಎ ಮತ್ತು ಮಹಾಘಟಬಂಧನ (ಎಂಟಿಬಿ) ಇಲ್ಲಿ ಪ್ರಮುಖ ಮೈತ್ರಿಕೂಟಗಳಾಗಿವೆ. ಹಾಲಿ ಸಿಎಂ ನಿತೀಶ್ ಕುಮಾರ್ ನೇತೃತ್ವದ ಎನ್​ಡಿಎ ವಿರುದ್ಧ ತೇಜಸ್ವಿ ಯಾದವ್ ನೇತೃತ್ವದ ಎಂಟಿಬಿ ತೀವ್ರ ಸ್ಪರ್ಧೆಯೊಡ್ಡಿದೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಮಹಾಘಟಬಂಧನದ ಗೆಲುವನ್ನು ಸೂಚಿಸಿವೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಒಟ್ಟು ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಅಕ್ಟೋಬರ್ 28, ನವೆಂಬರ್ 3 ಹಾಗೂ ನವೆಂಬರ್ 7ರಂದು ಮತದಾನ ನಡೆದಿತ್ತು. ಒಟ್ಟಾರೆ ಶೇ 57ರಷ್ಟು ಮತದಾನವಾಗಿತ್ತು. 3,755 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗುತ್ತಿದೆ.

ಹಿನ್ನಡೆಯಲ್ಲಿರುವ ಪ್ರಮುಖರು: ಪಪ್ಪು ಯಾದವ್, ಲವ್ ಸಿನ್ಹಾ(ಕಾಂಗ್ರೆಸ್), ಚಂದ್ರಿಕಾ ರಾಯ್ (ಜೆಡಿಯು), ಪ್ರವೀಣ್ ಸಿಂಗ್ (ಕಾಂಗ್ರೆಸ್), ಸಂತೋಷ್ ಕುಮಾರ್, ಲಲನ್ ಕುಮಾರ್(ಕಾಂಗ್ರೆಸ್), ಸುಭಾಷಿಣಿ ಯಾದವ್, ಮಸ್ಕೂರ್ ಉಸ್ಮಾನಿ (ಕಾಂಗ್ರೆಸ್)

ಮುನ್ನಡೆಯಲ್ಲಿರುವ ಪ್ರಮುಖರು: ಶ್ರೇಯಸಿ ಸಿಂಗ್(ಬಿಜೆಪಿ), ಅನಂತ್ ಸಿಂಗ್(ಆರ್​ಜೆಡಿ), ಎನ್.ಕೆ. ಯಾದವ್ (ಬಿಜೆಪಿ)

Team Newsnap
Leave a Comment
Share
Published by
Team Newsnap

Recent Posts

ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ

ಮುಂಬೈ: ನಿನ್ನೆ ಬೀಸಿದ ಬಿರುಗಾಳಿಗೆ ನಗರದಲ್ಲಿ ತಲೆಎತ್ತಿದ್ದ ಅಕ್ರಮ ಜಾಹಿರಾತು ಫಲಕ ಕುಸಿದು, 8 ಮಂದಿ ಸಾವನ್ನಪ್ಪಿದ್ದು, 60 ಜನರು… Read More

May 14, 2024

ರೇವಣ್ಣ ರಿಲೀಸ್ : ಬಿಗ್ ರಿಲೀಪ್

ಐದು ದಿನಗಳ ಜೈಲು ವಾಸಕ್ಕೆ ಅಂತ್ಯ ⁠5 ಲಕ್ಷ ರು ಬಾಂಡ್ , ಎಸ್ ಐಟಿ ತನಿಖೆಗೆ ಸಹಕರಿಸಬೇಕು ಎಂಬ… Read More

May 13, 2024

ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಕಿಡ್ನ್ಯಾಪ್ ಸಂತ್ರಸ್ತೆ

ಬೆಂಗಳೂರು : ಪ್ರಜ್ವಲ್‌ ರೇವಣ್ಣ ವಿಚಾರದ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಲೇ ಇದೆ. ಈ ಕೇಸ್‌ನಲ್ಲಿ ಸಂತ್ರಸ್ತೆ… Read More

May 13, 2024

ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್

ಹೈದ್ರಾಬಾದ್ : ನಿಜ ಹೇಳಬೇಕು ಅಂದ್ರೆ ಅಪಘಾವಾದ ಸ್ಥಳಕ್ಕೆ ಆಂಬ್ಯುಲೆನ್ಸ್ ಸುಮಾರು 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಕ್ಕೆ ಆಕೆ… Read More

May 13, 2024

CBSE 12 ನೇ ತರಗತಿಯ ಫಲಿತಾಂಶ ಪ್ರಕಟ: ಇಲ್ಲಿದೆ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್

ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ( CBSE ) 12ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದ್ದು… Read More

May 13, 2024

ರಾಜ್ಯದಾದ್ಯಂತ ಮುಂದಿನ 5 ದಿನ ಭಾರಿ ಮಳೆ

ಬೆಂಗಳೂರು : ಮುಂದಿನ 5 ದಿನ ರಾಜ್ಯದಾದ್ಯಂತ ಭಾರಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ… Read More

May 13, 2024