ಬಿಹಾರ ರಾಜ್ಯದ 243 ಕ್ಷೇತ್ರಗಳ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮತ್ತು ಮಹಾಘಟಬಂಧನ್ ಮೈತ್ರಿಕೂಟದ ಮಧ್ಯೆ ಬಿರುಸಿನ ಪೈಪೋಟಿ ನಡೆದಿದೆ.
ಮತ ಎಣಿಕೆಯ ಆರಂಭದಿಂದಲೂ ಹೆಚ್ಚೂಕಡಿಮೆ ಸಮಾನವಾಗಿ ಮುನ್ನಡೆ ಸ್ಥಿತಿ ಹೊಂದಿವೆ. ಈವರೆಗೆ 243 ಕ್ಷೇತ್ರಗಳ ಪೈಕಿ 242 ಕ್ಷೇತ್ರಗಳಲ್ಲಿ ಮತ ಎಣಿಕೆ ಮಾಹಿತಿ ಬಂದಿದ್ದು, ಎನ್ಡಿಎ ಮೈತ್ರಿಕೂಟ 121 ಕಡೆ ಮುನ್ನಡೆ ಹೊಂದಿದರೆ, ಮಹಾಘಟಬಂಧನ್ 112 ಕಡೆ ಮುನ್ನಡೆ ಪಡೆದಿದೆ. ಮಧ್ಯಾಹ್ನದಷ್ಟರಲ್ಲಿ ಬಹುತೇಕ ಫಲಿತಾಂಶ ಹೊರಬೀಳಲಿದೆ.
ಎನ್ಡಿಎ ಮೈತ್ರಿಕೂಟದಲ್ಲಿ ಜೆಡಿಯುಗಿಂತ ತುಸು ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಮಹಾಘಟಬಂಧನದಲ್ಲಿ ನಿರೀಕ್ಷೆಯಂತೆ ಆರ್ಜೆಡಿ ಭರ್ಜರಿ ಮುನ್ನಡೆ ಗಳಿಸಿದೆ. ಎಡಪಕ್ಷಗಳೂ ಕೂಡ ತಮ್ಮ ಅಸ್ತಿತ್ವವನ್ನು ಜೋರಾಗಿಯೇ ತೋರಿಸುತ್ತಿವೆ. ಒಟ್ಟಾರೆ ಪಕ್ಷಾವಾರು ಲೆಕ್ಕ ತೆಗೆದುಕೊಂಡಾಗ ಆರ್ಜೆಡಿ ಮೊದಲ ಸ್ಥಾನದಲ್ಲಿದೆ. ಬಿಜೆಪಿ ಮತ್ತು ಜೆಡಿಯು ನಂತರದ ಸ್ಥಾನಗಳಲ್ಲಿವೆ.
ಇದೇ ವೇಳೆ, ಹಲವಾರು ಕಾರಣಕ್ಕೆ ಬಿಹಾರ ಚುನಾವಣೆ ರಾಷ್ಟ್ರವ್ಯಾಪಿ ಕುತೂಹಲ ಮೂಡಿಸಿದೆ. ಎನ್ಡಿಎ ಮತ್ತು ಮಹಾಘಟಬಂಧನ (ಎಂಟಿಬಿ) ಇಲ್ಲಿ ಪ್ರಮುಖ ಮೈತ್ರಿಕೂಟಗಳಾಗಿವೆ. ಹಾಲಿ ಸಿಎಂ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ವಿರುದ್ಧ ತೇಜಸ್ವಿ ಯಾದವ್ ನೇತೃತ್ವದ ಎಂಟಿಬಿ ತೀವ್ರ ಸ್ಪರ್ಧೆಯೊಡ್ಡಿದೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಮಹಾಘಟಬಂಧನದ ಗೆಲುವನ್ನು ಸೂಚಿಸಿವೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಒಟ್ಟು ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಅಕ್ಟೋಬರ್ 28, ನವೆಂಬರ್ 3 ಹಾಗೂ ನವೆಂಬರ್ 7ರಂದು ಮತದಾನ ನಡೆದಿತ್ತು. ಒಟ್ಟಾರೆ ಶೇ 57ರಷ್ಟು ಮತದಾನವಾಗಿತ್ತು. 3,755 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗುತ್ತಿದೆ.
ಹಿನ್ನಡೆಯಲ್ಲಿರುವ ಪ್ರಮುಖರು: ಪಪ್ಪು ಯಾದವ್, ಲವ್ ಸಿನ್ಹಾ(ಕಾಂಗ್ರೆಸ್), ಚಂದ್ರಿಕಾ ರಾಯ್ (ಜೆಡಿಯು), ಪ್ರವೀಣ್ ಸಿಂಗ್ (ಕಾಂಗ್ರೆಸ್), ಸಂತೋಷ್ ಕುಮಾರ್, ಲಲನ್ ಕುಮಾರ್(ಕಾಂಗ್ರೆಸ್), ಸುಭಾಷಿಣಿ ಯಾದವ್, ಮಸ್ಕೂರ್ ಉಸ್ಮಾನಿ (ಕಾಂಗ್ರೆಸ್)
ಮುನ್ನಡೆಯಲ್ಲಿರುವ ಪ್ರಮುಖರು: ಶ್ರೇಯಸಿ ಸಿಂಗ್(ಬಿಜೆಪಿ), ಅನಂತ್ ಸಿಂಗ್(ಆರ್ಜೆಡಿ), ಎನ್.ಕೆ. ಯಾದವ್ (ಬಿಜೆಪಿ)
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
- ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
- 104ರನ್ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್
More Stories
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ