January 11, 2025

Newsnap Kannada

The World at your finger tips!

work,employee,experiment

Biggest Experiment: work Four days a week

ಪ್ರಾಯೋಗಿಕ ಹಂತ : ವಾರಕ್ಕೆ ನಾಲ್ಕೇ ದಿನ ಕೆಲಸ

Spread the love

ವಾರದ ಏಳು ದಿನಗಳ ಕಾಲ ಕೆಲಸ ಮಾಡುವುದೆಂದರೆ ಉದ್ಯೋಗಿಗಳಿಗೆ ಬೋರ್‌ ಹೊಡೆಯುತ್ತದೆ.ಇದೀಗ ವಾರಕ್ಕೆ ನಾಲ್ಕೇ ದಿನಗಳ ಕಾಲ ಕೆಲಸ ಮಾಡುವ ಕಾರ್ಯ ಪ್ರಾಯೋಗಿಕವಾಗಿ ಆರಂಭವಾಗಿದ್ದು, ಯುನೈಟೆಡ್‌ ಕಿಂಗ್‌ ಡಂ ನಲ್ಲಿ ಸೋಮವಾರದಿಂದ ಚಾಲನೆ ನೀಡಲಾಗಿದೆ.ಇದರಲ್ಲಿ 70 ಕಂಪನಿಗಳ 3300 ಕ್ಕೂ ಅಧಿಕ ಉದ್ಯೋಗಿಗಳು ಪಾಲ್ಗೊಂಡಿದ್ದಾರೆ.

WhatsApp Image 2022 06 07 at 12.44.42 PM
workers

ಇದನ್ನು ಓದಿ –ಬೆಂಗಳೂರಿನಲ್ಲಿ ಹಿಬ್ಜುಲ್ ಉಗ್ರನ ಬಂಧನ – ಹಿಂದೂಗಳ ಹತ್ಯೆಗೆ ಸಂಚು- ಯುವಕರೇ ಟಾರ್ಗೆಟ್​

ವಾರಕ್ಕೆ ನಾಲ್ಕು ದಿನಗಳ ಕಾಲ ಕೆಲಸ ಮಾಡಿದರೂ ಉದ್ಯೋಗಿಗಳಿಗೆ ಪೂರ್ಣ ವೇತನ ಸಿಗುತ್ತದೆ. 100:80:100 ಮಾದರಿಯಲ್ಲಿ ಈ ಪ್ರಯೋಗ ನಡೆಯಲಿದ್ದು, ಅಂದರೆ ಉದ್ಯೋಗಿಗಳು ಶೇ.100 ವೇತನದೊಂದಿಗೆ ಶೇ.80 ಸಮಯದಲ್ಲಿ ಕಾರ್ಯ ನಿರ್ವಹಿಸಿದರೂ ಉತ್ಪಾದಕತೆ ಶೇ.100 ಇರುವಂತೆ ನೋಡಿಕೊಳ್ಳಲು ಚಿಂತನೆ ನಡೆಸಲಾಗಿದೆ.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಬೋಸ್ಟನ್ ಕಾಲೇಜಿನ ಸಂಶೋಧಕರ ಸಹಭಾಗಿತ್ವದಲ್ಲಿ 4 ದಿನದ ವಾರದ ಈ ಪ್ರಾಯೋಗಿಕ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ʼದಿ ಗಾರ್ಡಿಯನ್ʼ ವರದಿ ಮಾಡಿದೆ.

ಉದ್ಯೋಗ ಮತ್ತು ಜೀವನ ತೃಪ್ತಿ, ಆರೋಗ್ಯ, ನಿದ್ರೆ, ಶಕ್ತಿಯ ಬಳಕೆ, ಪ್ರಯಾಣ ಮತ್ತು ಜೀವನದ ಇತರ ಹಲವು ಅಂಶಗಳ ವಿಷಯದಲ್ಲಿ ಉದ್ಯೋಗಿಗಳು ಹೆಚ್ಚುವರಿ ದಿನದ ರಜೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ವಿಶ್ಲೇಷಿಸಲಾಗುತ್ತದೆ ಎಂದು ಪ್ರೊಫೆಸರ್ ಜೂಲಿಯೆಟ್ ಸ್ಕೋರ್ ತಿಳಿಸಿದ್ದಾರೆ.

WhatsApp Image 2022 06 07 at 12.44.48 PM
Workers

ಸರ್ಕಾರದ ಬೆಂಬಲಿತ ವಾರಕ್ಕೆ ನಾಲ್ಕು ದಿನಗಳ ಕೆಲಸದ ಪ್ರಯೋಗಗಳು ಈ ವರ್ಷ ಸ್ಪೇನ್ ಮತ್ತು ಸ್ಕಾಟ್ಲೆಂಡ್‌ನಲ್ಲಿ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ. ಕಡಿಮೆ ಕೆಲಸದ ವಾರದ ಅತಿದೊಡ್ಡ ಯೋಜನೆಯನ್ನು 2015 ಮತ್ತು 2019 ರ ನಡುವೆ ಐಸ್ಲ್ಯಾಂಡ್ ಮೊದಲು ನಡೆಸಿತ್ತು. ಈ ಎರಡು ಪ್ರಯೋಗಗಳಲ್ಲಿ ಸುಮಾರು 2,500 ಸಾರ್ವಜನಿಕ ವಲಯದ ಕೆಲಸಗಾರರು ಭಾಗವಹಿಸಿದ್ದರು. ಪ್ರಮುಖ ಅಂಶವೆಂದರೆ ಭಾಗವಹಿಸಿದವರ ಉತ್ಪಾದಕತೆಯಲ್ಲಿ ಯಾವುದೇ ಕುಸಿತ ಕಂಡುಬಂದಿಲ್ಲ.

ಇತ್ತೀಚಿನ ದಿನಗಳಲ್ಲಿ ಹಲವಾರು ದೇಶಗಳಲ್ಲಿ ಕಡಿಮೆ ಕೆಲಸದ ವಾರಗಳಿಗೆ ಬೇಡಿಕೆ ಹೆಚ್ಚಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಕಂಪನಿಗಳು ʼವರ್ಕ್‌ ಫ್ರಂ ಹೋಂʼ ಮಾದರಿಯನ್ನು ಅಳವಡಿಸಿಕೊಂಡಿದ್ದು, ಇದು ಪ್ರಯಾಣದ ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡಿತ್ತು.

Copyright © All rights reserved Newsnap | Newsever by AF themes.
error: Content is protected !!