January 10, 2025

Newsnap Kannada

The World at your finger tips!

bigboss

ಜನವರಿ ಮೂರು / ನಾಲ್ಕನೇ ವಾರದಲ್ಲಿ ಬಿಗ್ ಬಾಸ್ ಸೀಜನ್ 8 ಆರಂಭ ?

Spread the love

ಬಿಗ್ ಬಾಸ್ ಸೀಸನ್ 8 ಆರಂಭಕ್ಕೆ ಮುಹೂರ್ತ ಫಿಕ್ಸ್.ಈ ಬಾರಿಯ ಬಿಗ್ ಬಾಸ್ ಆರಂಭ ಯಾವಾಗ ಗೊತ್ತಾ

ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ ‌ ಸೀಜನ್ – 8 ರ ಆರಂಭಕ್ಕೆ ವಾರಗಳ ಆರಂಭವಾಗಿದೆ.

ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಕನ್ನಡದ ಬಿಗ್ ಬಾಸ್ ನ ಹೊಸ ಸೀಸನ್ ಇನ್ನೂ ಆರಂಭವಾಗಿಲ್ಲ. ಆದರೆ ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಬಿಗ್ ಬಾಸ್ ಆರಂಭವಾಗಿವೆ. ಕನ್ನಡದಲ್ಲಿ 8 ನೇ ಸೀಸನ್ ಆರಂಭಕ್ಕಾಗಿ ವಾರಗಳ ಗಣನೆ ಶುರುವಾಗಿದೆ.

ಈಗ ಬಂದಿರುವ ಹೊಸ ಮಾಹಿತಿಯಂತೆ ಬಿಗ್ ಬಾಸ್ ಸೀಸನ್ 8 ಜನವರಿ ತಿಂಗಳ ಮೂರು ಅಥವಾ ನಾಲ್ಕನೆಯ ವಾರದಲ್ಲಿ ಆರಂಭವಾಗಲಿದೆ. ಬಿಗ್ ಬಾಸ್ ಸೀಸನ್ 8 ನ್ನು ಆರಂಭ ಮಾಡುವ ಪ್ರಕ್ರಿಯೆಗಳು ಈಗಾಗಲೇ ಕೊನೆಯ ಹಂತಕ್ಕೆ ಬಂದಿವೆ.

ಈ ಬಾರಿ ಮನೆಯನ್ನು ಪ್ರವೇಶ ಮಾಡಲಿರುವ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಕೂಡ ಮುಗಿದಿದೆ. ನಟ ಕಿಚ್ಚ ಸುದೀಪ್ ತಮ್ಮ ಫ್ಯಾಂಟಮ್ ಸಿನಿಮಾ ಚಿತ್ರೀಕರಣವನ್ನು ಮುಗಿಸಿ, ಅನಂತರ ಬಿಗ್ ಬಾಸ್ ಶೋನಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

Copyright © All rights reserved Newsnap | Newsever by AF themes.
error: Content is protected !!