December 25, 2024

Newsnap Kannada

The World at your finger tips!

murder,businnesman,son

Big twist in Mysore businessman's murder case - 16-year-old son who killed his father!

ಮೈಸೂರು ಉದ್ಯಮಿಯ ಕೊಲೆ ಕೇಸ್‍ಗೆ ಬಿಗ್ ಟ್ವಿಸ್ಟ್ – ತಂದೆಯನ್ನೇ ಕೊಂದ 16ರ ಮಗ!

Spread the love

ಮೈಸೂರಿನಲ್ಲಿ ಸೋಮವಾರ ಬೃಂದಾವನ ಬಡಾವಣೆಯಲ್ಲಿ ನಡೆದ ಅಗರ ಬತ್ತಿ ಉದ್ಯಮಿಯ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ ತಂದೆಯನ್ನೇ ಬರ್ಬರವಾಗಿ 16ರ ಮಗನೇ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ

ಬೃಂದಾವನ ಬಡಾವಣೆಯ ನಿವಾಸಿ ರಿಯಲ್ ಎಸ್ಟೇಟ್ ಹಾಗೂ ಅಗರಬತ್ತಿ ವ್ಯಾಪಾರಿ ಸಂಪತ್ ಕುಮಾರ್ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. 16 ವರ್ಷದ ಮಗನ ಮುಂದೆಯೇ ತಂದೆಯನ್ನು ಕೊಲೆ ಮಾಡಲಾಗಿದೆ ಹೇಳಲಾಗಿತ್ತು.ಇದನ್ನು ಓದಿ –ಚಾಮರಾಜನಗರದಲ್ಲಿ ಉಪನ್ಯಾಸಕಿ ಚಂದನಾ ಆತ್ಮಹತ್ಯೆ

ಕೊಲೆಯಾದ ಸಂಪತ್ ಅವರ 16 ವರ್ಷದ ಮಗ, ತನ್ನ ಮುಂದೆಯೇ ರಾಡ್‍ಗಳಿಂದ ತನ್ನ ತಂದೆಯನ್ನು ಅಪರಿಚಿತರು ಹತ್ಯೆ ಮಾಡಿ ಓಡಿ ಹೋದರು ಎಂದು ಪೊಲೀಸರಿಗೆ ಹೇಳಿದ್ದ.

ಈ ಕೊಲೆಗೆ ರಿಯಲ್ ಎಸ್ಟೇಟ್ ಉದ್ಯಮದ ವೈಷಮ್ಯ ಕಾರಣ ಇರಬಹುದು ಎಂದು ಮೇಲ್ನೋಟಕ್ಕೆ ಅನ್ನಿಸಿತ್ತು. ಆದರೆ ಕೊಲೆಯಾದ ವ್ಯಕ್ತಿಯ ಮಗ ಹೇಳಿಕೆಗಳಲ್ಲೂ ಅನುಮಾನಗಳು ಮೂಡಿದ್ದವು.

ಹೀಗಾಗಿ ಪೊಲೀಸರು ಕೊಲೆಯಾದ ವ್ಯಕ್ತಿಯ ಮಗನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಹದಿಹರೆಯದ ಮಗನೇ ತನ್ನ ತಂದೆಯನ್ನು ಬರ್ಬರವಾಗಿ ಕೊಂದ ಸತ್ಯ ಹೊರ ಬಿದ್ದಿದೆ.

ಸಂಪತ್ ಕುಟುಂಬದಲ್ಲಿ ಬಹಳ ವೈಮನಸ್ಸು ಇತ್ತು. ಸಂಪತ್ ಪ್ರತಿ ನಿತ್ಯವೂ ತನ್ನ ಪತ್ನಿ – ಮಗನ ಜೊತೆ ಜಗಳವಾಡ್ತಿದ್ದ. ಇದರಿಂದ ಬೇಸತ್ತ ಮಗ, ತನ್ನ ತಾಯಿ ಮನೆಯಲ್ಲಿ ಇಲ್ಲದ ವೇಳೆ ಕಬ್ಬಿಣದ ರಾಡ್‍ನಿಂದ ತಂದೆಯನ್ನು ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ನಂತರ ಈ ಕೊಲೆಯನ್ನು ಅಪರಿಚಿತರು ಮಾಡಿ ಹೋದರು ಎಂದು ಬಿಂಬಿಸುವ ನಾಟಕವಾಡಿದ್ದಾನೆ. ಮನೆಯಿಂದ ಓಡಿ ಹೊರಗಡೆ ಬಂದು ಅರಚಿಕೊಂಡು ಯಾರೋ ಕೊಲೆ ಮಾಡಿ ಓಡಿ ಹೋದರು ಎಂದು ಸನ್ನಿವೇಶ ಸೃಷ್ಟಿಸಿದ್ದಾನೆ. ತನ್ನ ತಾಯಿಗೂ ಇದೇ ಕಥೆ ಹೇಳಿದ ಮಗ, ಅದರ ಆಧಾರದ ಮೇಲೆ ದೂರು ನೀಡಲಾಗಿತ್ತು.

ಕೊಲೆ ನಡೆದ ವೇಳೆ, ಅಲ್ಲಿನ ಸನ್ನಿವೇಶ, ಸಿಸಿಟಿವಿ ದೃಶ್ಯಗಳು ಎಲ್ಲವನ್ನು ಗಮನಿಸಿದ ಪೋಲಿಸರು ಯಾರು ಮನೆಗೆ ಬರದೆ ಇರೋದು ಸ್ಪಷ್ಟವಾಗಿದೆ. ಆಗ, ಮಗನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾಗ ಮಗ ತಾನೇ ತನ್ನ ತಂದೆಯನ್ನು ಕೊಂದೆ ಎಂಬುದನ್ನು ಒಪ್ಪಿಕೊಂಡಿದ್ದಾನೆ.

Copyright © All rights reserved Newsnap | Newsever by AF themes.
error: Content is protected !!