April 13, 2025

Newsnap Kannada

The World at your finger tips!

cheluvaraya swamy

ಭೂಕಬಳಿಕೆ ಪ್ರಕರಣ: ಸಚಿವ ಚೆಲುವರಾಯಸ್ವಾಮಿಗೆ ಬಿಗ್ ರಿಲೀಫ್

Spread the love

ಬೆಂಗಳೂರು: ಭೂಕಬಳಿಕೆ ಪ್ರಕರಣದಲ್ಲಿ ರಾಜ್ಯದ ಸಚಿವ ಚೆಲುವರಾಯಸ್ವಾಮಿಗೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, 2 ಕೇಸ್‌ಗಳನ್ನು ರದ್ದುಮಾಡುವಂತೆ ಆದೇಶಿಸಿದೆ.

ಸಚಿವ ಚೆಲುವರಾಯಸ್ವಾಮಿ ವಿರುದ್ಧ ಭೂಕಬಳಿಕೆ ಆರೋಪ ಸಂಬಂಧ 2 ಕೇಸ್ ದಾಖಲಾಗಿತ್ತು. ಈ ಪ್ರಕರಣಗಳು ತಾನು ಅನ್ಯಾಯವಾಗಿ ಭೀತಿಗೊಳಗಾಗುವಂತೆ ಮಾಡಲಾಗಿವೆ ಎಂದು ಹೇಳಿ, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಬೆಂಗಳೂರಿನ ದಾಸನಪುರ ಹೋಬಳಿಯ ಮಾಕಳಿ ಗ್ರಾಮದ 3 ಎಕರೆ 13 ಗುಂಟೆ ಜಮೀನು ಕಬಳಿಕೆ ಆರೋಪ ಈ ಪ್ರಕರಣಗಳಲ್ಲಿತ್ತು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್, 2 ಕೇಸ್‌ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವ ತೀರ್ಪು ನೀಡಿದೆ.
ಇದನ್ನು ಓದಿ -‘ರಾ’ ಕಚೇರಿಯಲ್ಲಿ ಉದ್ಯೋಗ ಆಶೆ: 90 ಲಕ್ಷ ವಂಚನೆ ನಡೆಸಿದ ಇಬ್ಬರು ಬಂಧಿತರು!

ಈ ತೀರ್ಪಿನಿಂದ ಸಚಿವ ಚೆಲುವರಾಯಸ್ವಾಮಿಗೆ ಬಿಗ್ ರಿಲೀಫ್ ಲಭ್ಯವಾಗಿದ್ದು, ಭೂಕಬಳಿಕೆ ಪ್ರಕರಣದಿಂದ ಅವರು ಮುಕ್ತರಾಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!