January 10, 2025

Newsnap Kannada

The World at your finger tips!

prathap

ಬಿಗ್ ಬಾಸ್ ಸೀಜನ್ – 8: ಗೆಸ್ ಮಾಡಿ, ಹೊಸ ಮುಖಗಳನ್ನು!ಅನಿರುದ್ಧ, ಡ್ರೋನ್ …..?

Spread the love

ಫೇಮಸ್ ಜೊತೆ ಜೊತೆಯಲ್ಲಿ ಧಾರವಾಹಿಯ ಆರ್ಯವರ್ಧನ್ (ಅನಿರುದ್ಧ) ಸೇರಿದಂತೆ ದ್ರೋಣ್ ಪ್ರತಾಪ್, ಟಿಕ್ ಟಾಕ್ ಚೆಲುವೆ ಸೋನುಗೌಡ ಮತ್ತು ಬಿಂದು ಗೌಡ, ಪತ್ರಕರ್ತೆ ರಾಧಾ ಹೀರೇಗೌಡರ್
ಈ ಸೀಜನ್ ಬಿಗ್ ಬಾಸ್ ಸ್ಪರ್ಧಿಗಳಾಗಬಹುದು.

ದೇವರಾಣೆಗೂ ಇದು ನಮ್ಮ ಗೆಸ್ ಅಲ್ಲ. ನಮ್ಮ ಮಾಹಿತಿ ಅಲ್ಲ. ನೆಟ್ಟಿಗರು ಗೆಸ್ ಮಾಡುತ್ತಿದ್ದಾರೆ. ಟ್ರೋಲ್ ಪೇಜ್ ಗಳಲ್ಲಿ ಹಲವರ ಹೆಸರುಗಳನ್ನು ಹರಿಬಿಟ್ಟಿದ್ದಾರೆ.

ಅನಿರುದ್ಧ ಈಗಾಗಲೇ ಜೊತೆ ಜೊತೆಯಲ್ಲಿ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಏನಾದ್ರೂ ಮೂರು ತಿಂಗಳು ಬಿಗ್ ಬಾಸ್ ಮನೆಗೆ ಹೋದ್ರೆ ತಮ್ಮ ನೆಚ್ಚಿನ ಹೀರೊ ಧಾರವಾಹಿಯಲ್ಲಿ ನೋಡಲು ಸಿಗುವುದಿಲ್ಲ. ಆ ಬೇಸರನೂ ಇದೆ.

ಸಿದ್ದತೆ ಜೋರಾಗಿದೆ – ಡೇಟ್ ಫಿಕ್ಸಾಗಿಲ್ಲ:

ಕಲರ್ಸ್ ಕನ್ನಡದ ಬಿಗ್ ಬಾಸ್ ಸೀಸನ್- 8 ರಆರಂಭಕ್ಕೆ ಸಿದ್ಧತೆ ಭರದಿಂದ ನಡೆಯುತ್ತಿದೆ. ಬಿಗ್ ಬಾಸ್ ಮನೆ ನಿರ್ಮಾಣ, ಕ್ಯಾಮರಾ ಅಳವಡಿಕೆ, ಟಾಸ್ಕ್ ಗಳ ಕಾನ್ಸೆಫ್ಟ್ ಸೇರಿದಂತೆ ಸಿದ್ಧತೆ ಜೋರಾಗಿ ಗೌಪ್ಯ ವಾಗಿ ನಡೆದಿದೆ.

anirudh

ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಯಾರ್ಯಾರು ಎಂಬ ಆಯ್ಕೆ ಕೂಡ ಪೂರ್ಣಗೊಂಡಿದೆ. ಬಿಗ್ ಬಾಸ್ ಮನೆಗೆ ಹೋದ ಮೇಲೆ ಸ್ಪರ್ಧಿಗಳ ಯಾರು ಎಂಬುವುದು ಕಡೆ ಘಳಿಗೆಯಲ್ಲಿ ಸಸ್ಷೆನ್ಸ್ ರಟ್ಟಾಗಲಿದೆ.‌

ಇಂದು ಗೆಸ್ಸಿಂಗ್ ಪ್ರಕಾರ ಈ ಬಾರಿಯ ಬಿಗ್ ಬಾಸ್ ನಲ್ಲಿ ಎಲ್ಲಾ ಸೆಲೆಬ್ರಿಟಿಗಳೆ ಆಗಿದ್ದಾರೆ. ನಿರೂಪಕಿ, ಸ್ವಾಮೀಜಿ. ಡ್ಯಾನ್ಸರ್, ಪತ್ರಕರ್ತೆ ಅಥವಾ ಪತ್ರಕರ್ತ ಸೇರಿದಂತೆ ಹಲವರು ಇರುತ್ತಾರಂತೆ.
ಬಿಗ್ ಬಾಸ್ ಸ್ಪರ್ಧಿಗಳು ಯಾರು ಎಂಬುವುದು ನೆಟ್ಟಿಗರು ಗೆಸ್ ಮಾಡುತ್ತಿದ್ದಾರೆ. ಟ್ರೋಲ್ ಪೇಜ್ ಗಳಲ್ಲಿ ಹಲವರ ಹೆಸರುಗಳು ನುಸುಳುತ್ತಿದೆ.
ಬಿಗ್ ಬಾಸ್ ಸ್ಪರ್ಧಿಯ ಗುಟ್ಟು ಕಡೆ ಘಳಿಗೆಯಲ್ಲಿ ರಟ್ಟಾಗುತ್ತದೆ.
ಅಲ್ಲಿಯತನಕ ವೇಟ್ ಆಂಡ್ ಸೀ….

Copyright © All rights reserved Newsnap | Newsever by AF themes.
error: Content is protected !!