January 17, 2025

Newsnap Kannada

The World at your finger tips!

chaitra kotturu

ಬಿಗ್ ಬಾಸ್ ಸ್ಪರ್ಧಿ ಚೈತ್ರ ಕೊಟ್ಟೂರು ಆತ್ಮಹತ್ಯೆಗೆ ಯತ್ನ

Spread the love

ಕಳೆದ ವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಬಿಗ್ ಬಾಸ್ ಸ್ಪರ್ಧೆ ಚೈತ್ರ ಕೊಟ್ಟೂರ್ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿದೆ.

ಗಂಭೀರ ಸ್ಥಿತಿಯಲ್ಲಿರುವ ಚೈತ್ರ ಕೊಟ್ಟೂರ್ ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬರಹಗಾರ್ತಿ ಚೈತ್ರ ಕೊಟೂರ್ ಗೆ ಕಳೆದ ವಾರ ಬೆಂಗಳೂರಿನ ಬ್ಯಾಡರಾಯನಪುರದ ಗಣಪತಿ ದೇವಸ್ಥಾನದಲ್ಲಿ ಮಂಡ್ಯದ ನಾಗಾರ್ಜುನ್ ಜೊತೆ ಮದುವೆ ಯಾಗಿದ್ದರು.

ಆದರೆ ತಾಳಿ ಕಟ್ಟಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ಇವರ ದಾಂಪತ್ಯ ಜೀವನ ಬಿರುಕು ಬಿಟ್ಟಿತು. ಕೆಲವು ಕನ್ನಡಪರ ಸಂಘಟನೆಗಳು ಬೆದರಿಸಿ ನನ್ನನ್ನು ಬಲವಂತವಾಗಿ ಮದುವೆ ಮಾಡಿದ್ದಾರೆ ಎಂದು ನಾಗಾರ್ಜುನ್ ಆರೋಪಿಸಿ ಪೋಲಿಸ್ ಠಾಣೆಯ ಮೆಟ್ಡಿಲೇರಿದ್ದರು.

ಈ ವಿಷಯದಲ್ಲಿ ಪೋಲಿಸರು ರಾಜಿ ಸಂಧಾನದ ಮೂಲಕ ಸಮಸ್ಯೆ ಪರಿಹಾರ ಮಾಡಿಕೊಳ್ಳೋಣವೆಂದು ಭರವಸೆ ನೀಡಿದ ನಾಗಾರ್ಜುನ್ ಕುಟುಂಬಸ್ಥರು ಮಂಡ್ಯಗೆ ತೆರಳಿದರು. ಇಲ್ಲಿಯ ತನಕ ಮಾತುಕತೆಗೆ ಬಂದಿಲ್ಲವೆಂದು ಚೈತ್ರ ಎರಡು ಬಾರಿ ಆತ್ಮಹತ್ಯೆಗೆ ಯತ್ನ ಮಾಡಿದ್ದರಂತೆ.

ಪೋಷಕರು ಚೈತ್ರಳಿಗೆ ಧೈರ್ಯ ಹೇಳಿ ಸಮಸ್ಯೆ ಪರಿಹಾರ ಮಾಡುತ್ತೇವೆಂದು ಭರವಸೆ ಕೊಟ್ಟಿದ್ದರು. ಆದರೆ ನಾಗಾರ್ಜುನ್ ಕುಟಂಬಸ್ಥರು ಮದುವೆಯಾದ ದಿನ ಹೋದವರು ಮತ್ತೆ ಬರಲೇ ಇಲ್ಲ. ಇದರಿಂದ ಮನನೊಂದು ಚೈತ್ರ ಕೊಟ್ಟೂರ್ ಇಂದು ಬೆಳಿಗ್ಗೆ 5 ಗಂಟೆ ವೇಳೆಯಲ್ಲಿ ವಿಷ ಸೇವಿಸಿದ್ದಾರೆ. ತೀವ್ರ ರೀತಿಯಲ್ಲಿ ಅಸ್ವಸ್ಥಗೊಂಡ ಚೈತ್ರಳನ್ನು ಕೋಲಾರದ ಇಟಿಸಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!