ಅಮೇರಿಕಾ ಅಧ್ಯಕ್ಷ ಕಿರೀಟ ಜೋ ಬೈಡನ್ ಮುಡಿಗೆ

Team Newsnap
1 Min Read

ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅಮೇರಿಕಾದ ನೂತನ ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದಾರೆ. ಈ ಕುರಿತಂತೆ ಅಧೀಕೃತ ಘೋಷಣೆ ಹೊರ ಬಿದ್ದಿದೆ

ಜೋ ಬೈಡನ್ 284 ಮತಗಳನ್ನು ಪಡೆದರು. ರಿಪಬ್ಲಿಕ್ ಪಾರ್ಟಿ ಡೊನಾಲ್ಡ್ ಟ್ರಂಪ್ 214 ಮತಗಳನ್ನು ಪಡೆದು ಪರಾಭವಗೊಂಡರು. ಟ್ರಂಪ್ 2 ನೇ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದಾರೆ.ಜೋ ಬೈಡನ್ ಬಹುಮತಕ್ಕಿಂತ (270) ಹೆಚ್ಚುವರಿಯಾಗಿ 14 ಮತಗಳನ್ನು ಪಡೆದಿದ್ದಾರೆ

ಅಮೇರಿಕಾದ ಉಪಾಧ್ಯಕ್ಷ ರಾಗಿ ಭಾರತದ ತಮಿಳುನಾಡು ಮೂಲದ ಕಮಲಾ ಹ್ಯಾರಿಸ್ ಆಯ್ಕೆ ಯಾಗುವುದು ಬಹುತೇಕ ಖಚಿತವಾಗಿದೆ. ಅಮೇರಿಕಾದ ರಾಜಕೀಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಹಿಳೆಯೊಬ್ಬರು ಅಮೇರಿಕಾದ. ಉನ್ನತ ಸ್ಥಾನ ಕ್ಕೆ ಏರಲಿದ್ದಾರೆ

ಕಳೆದ 50 ವರ್ಷಗಳ ಸುಧೀರ್ಘ ಇತಿಹಾಸವನ್ನು ಹೊಂದಿರುವ ಜೋ ಬೈಡನ್ ಅಮೇರಿಕಾದ 46 ನೇ ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದಾರೆ. ಪೆನ್ಸಿಲ್ವೇನಿಯಾ ಕ್ಷೇತ್ರದಿಂದ ಗೆದ್ದಿರುವ ಬೈಡನ್, ಟ್ರಂಪ್ ಗೆ ಭಾರಿ ಮುಖಭಂಗವಾಗುವ ರೀತಿಯಲ್ಲಿ ಗೆದ್ದು ತೋರಿಸಿದ್ದಾರೆ.

Share This Article
Leave a comment