January 11, 2025

Newsnap Kannada

The World at your finger tips!

BJP , JDS , alliance

ಹಾಸನದಲ್ಲಿ ಭವಾನಿ ಗೆಲ್ಲಲ್ಲ – ರೇವಣ್ಣ ಕುಟುಂಬ ಶಕುನಿಗಳ ಮಾತು ಕೇಳುತ್ತಿದೆ : ಎಚ್ ಡಿ ಕೆ

Spread the love

ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಯಾವುದೇ ಕಾರಣಕ್ಕೂ ಗೆಲ್ಲಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ರೇವಣ್ಣ ಮತ್ತು ಅವರ ಕುಟುಂಬಕ್ಕೆ ಯಾರು ತಲೆ ತುಂಬಿತ್ತಿದ್ದಾರೆ ಎಂಬುದು ನಂಗೆ ಗೊತ್ತು. ಆದರೆ ಅವರು ಕೂಡ ಶಕುನಿಗಳ ಮಾತು ಕೇಳುತ್ತಿದ್ದಾರೆ. ಶಕುನಿಗಳು ದೇವೇಗೌಡರ ಕುಟುಂಬವನ್ನು ಮುಗಿಸಬೇಕು ಅಂತಿದ್ದಾರೆ. ರೇವಣ್ಣ ಅಂತಹವರಿಗೆ ಹಾಲೆರಿಯುತ್ತಿದ್ದಾರೆ. ಈ ಮಣ್ಣಿನ ಗುಣದಲ್ಲಿಯೇ ಅದು ಇದೆ. ಇಂತಹ ಸಂಗತಿಗಳಿಂದ ಕುರುಕ್ಷೇತ್ರ ಯುದ್ಧವಾಗಿದೆ ಎಂದು ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ಡಿ ಕೆ ಅವರು, ಹಾಸನದಲ್ಲಿ ಸದೃಢ, ಸಾಮಾನ್ಯ ಕಾರ್ಯಕರ್ತರಿದ್ದಾರೆ. ಅವರ ನಿರ್ಧಾರವೇ ಅಂತಿಮವಾಗಿದೆ. ವಾಸ್ತವಿಕ ಮತ್ತು ಅಲ್ಲಿನ ತಳಮಟ್ಟದ ಭಾವನೆಗಳನ್ನು ನಾನು ಅರಿತು ಮಾತನಾಡುತ್ತಿದ್ದೇನೆ. ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಸೋಲು ಖಚಿತ. ನಾನು ನನ್ನದೆಯಾದ ರೀತಿಯಲ್ಲಿ ಸಮೀಕ್ಷೆ ಮಾಡಿಸಿ ವರದಿ ತರಿಸಿಕೊಂಡಿದ್ದೇನೆ. ಅದನ್ನು ಗಮನದಲ್ಲಿಟ್ಟುಕೊಂಡು ಹೇಳುತ್ತಿದ್ದೇನೆ ಎಂದರು.

ಗೊಂದಲ ಬಗ್ಗೆ ಹಲವಾರು ಚರ್ಚೆ, ನಾಲ್ಕು ಗೋಡೆಗಳಲ್ಲಿ ನಡೆದಿದ್ದಾಗಿದೆ. ಆದರೆ ಮಾಧ್ಯಮಗಳು ತಮಗೆ ಏನು ಬೇಕೋ ಹಾಗೇ ಮಾತನಾಡುತ್ತಿದ್ದಾರೆ. ಈಗ ಅವರಿಗೆ ಟಿಕೆಟ್ ಕೊಟ್ಟು ನಾಳೆ ಸೋತ ಮೇಲೆ ಮಾಧ್ಯಮಗಳಿಗೆ ಆಹಾರವಾಗಲ್ಲ ಎಂದು ಹೇಳಿದರು.

ನಾನು ಮೊದಲಿಂದಲೂ ಹಾಸನದ ಟಿಕೆಟ್ ಸಾಮಾನ್ಯ ಕಾರ್ಯಕರ್ತರಿಗೆ ನೀಡುವ ಸುಳಿವು ನೀಡಿದ್ದೆ. ಕಳೆದ ಒಂದು ವರ್ಷದ ಹಿಂದೆ ಒಬ್ಬ ವ್ಯಕ್ತಿ ನಮ್ಮ ಕುಟುಂಬದ ಮೇಲೆ ಸವಾಲು ಹಾಕಿದ್ದರು. ಆಗಿನಿಂದ ನಾನು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!