December 24, 2024

Newsnap Kannada

The World at your finger tips!

WhatsApp Image 2023 07 17 at 6.24.39 PM

ಕೆ.ಟಿ. ಎಸ್ ಗೆ 2022 ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ

Spread the love

ಬೆಂಗಳೂರು: ವಿಧಾನಪರಿಷತ್‍ನ 2022 ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಮಾಜಿ ಶಾಸಕ ಕೆಟಿ ಶ್ರೀಕಂಠೇಗೌಡ ಆಯ್ಕೆಯಾಗಿದ್ದಾರೆ.

ಮೂರು ಬಾರಿ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಗೌಡರ ಪರಿಷತ್ ನ ಸದಸ್ಯ ಅವಧಿ ಇತ್ತೀಚೆಗೆ ಅಂತ್ಯಗೊಂಡಿತ್ತು.

ಉತ್ತಮ ಸಂಸದೀಯ ಪಟುವಾಗಿದ್ದ ಅವರು, ದಕ್ಷಿಣ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಜಾತ್ಯಾತೀತ ಜನಾತದಳದ ಹಿರಿಯ ನಾಯಕರಾಗಿದ್ದ ಗೌಡರು ವಾಗ್ಮಿಗಳು.

ಪರಿಷತ್‍ನಲ್ಲಿ ಪ್ರತಿಪಕ್ಷದ ಉಪನಾಯಕ ಸೇರಿದಂತೆ ಹಲವು ಹುದ್ದೆಗಳನ್ನು ಅಲಂಕರಿಸಿದ್ದರು. ಪರಿಷತ್‍ನಲ್ಲಿ ಅವರ ನಡವಳಿಕೆ, ಸಾಧನೆ, ಭಾಗವಹಿಸುವಿಕೆ, ಜನಪರಕಾಳಜಿಯನ್ನು ಪರಿಗಣಿಸಿ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಶ್ರೀಕಂಠೇಗೌಡರಿಗೆ 2022 ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

Copyright © All rights reserved Newsnap | Newsever by AF themes.
error: Content is protected !!