January 28, 2026

Newsnap Kannada

The World at your finger tips!

2020 6largeimg 1622533140

ನಾಳೆ ಅಘೋಷಿತವಾಗಿ ಬಂದ್ ಆಗಲಿದೆ ಬೆಂಗಳೂರು

Spread the love

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ ನೀತಿಯನ್ನು ವಿರೋಧಿಸಿ ರೈತ ಸಂಘಟನೆಗಳು ನಾಳೆ ಬೆಂಗಳೂರನ್ನು ಅಘೋಷಿತವಾಗಿ ಬಂದ್ ಮಾಡಲಿವೆ.

ಕಳೆದ ನಾಲ್ಕು ದಿನಗಳಿಂದ ಕೃಷಿ ಕಾಯ್ದೆ ವಿರುದ್ಧ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಸಂಬಂಧ ಅಧಿಕೃತ ಬಂದ್ ಸೋಮವಾರ ಆಗಲಿದೆ ಎಂದು ತಿಳಿದು ಬಂದಿದೆ. ನಾಳೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಿರುವ ರೈತರು, ಬೆಂಗಳೂರು ನಗರದ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ‌ ಧರಣಿ ನಡೆಸಲಿದ್ದಾರೆ. ಇದರಿಂದ ನಗರದ ಎಲ್ಲ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುವ ಸಂಭವವಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೃಷಿ ಕಾಯ್ದೆ ಜಾರಿಯನ್ನು ನಿಲ್ಲುಸುವಂತೆ ವಿನಂತಿ ಮಾಡಿ ದ್ದರೂ ಸರ್ಕಾರ ರೈತರ ಬೇಡಿಕೆಯನ್ನು ಕಡೆಗಣಿಸಿದೆ. ಹಾಗಾಗಿ ರೈತರು ಈ ರೀತಿಯ ವಿಭಿನ್ನ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

error: Content is protected !!