Trending

ಚೊಚ್ಚಲ ಚಾಲೆಂಜಿನಲ್ಲಿ ಗೆದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ; ಉದಯವಾಗದ ‘ಸನ್’ರೈಸರ್ಸ್ ತಂಡದ ಗೆಲುವು

ದುಬೈನ ಅಲ್ ಶೇಕ್ ಝಹೇಜ್ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್‌ ೨೦೨೦ ರ ೧೩ನೇ ಸರಣಿಯ ಮೂರನೇ ದಿನದ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಭರ್ಜರಿ ಗೆಲುವನ್ನು ಸಾಧಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಸನ್ ರೈಸರ್ಸ್ ತಂಡ ರಾಯಲ್ ಚಾಲೆಂಜರ್ಸ್ ತಂಡದ ಬಲವಾದ ಪೈಪೋಟಿಯನ್ನು ಎದುರಿಸಬೇಕಾಯಿತು. ರಾಯಲ್ ಚಾಲೆಂಜರ್ಸ್ ಪರ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ದೇವದತ್ ಪಡಿಕ್ಕಲ್ ಹಾಗೂ ಎ.ಫಿಂಚ್ ಅವರು ಆಕರ್ಷಣೀಯ ಆಟ ಪ್ರಾರಂಭಿಸಿದರು. ಆದರೆ ಸನ್ ರೈಸರ್ಸ್ ಆಫ್ ಹೈದರಾಬಾದ್ ತಂಡದ ಮಿಚೆಲ್ ಮಾರ್ಷ್ ಅವರು ಆರಂಭಿಕ‌ ಬ್ಯಾಟ್ಸ್ ಮನ್ ಗಳಿಗೆ ಬೌಲಿಂಗ್ ಮಾಡುವಾಗ ಅವರ ಕಾಲು ಉಳುಕಿತು. ಇದರಿಂದ ಸನ್ ರೈಸರ್ಸ್ ತಂಡದಲ್ಲಿ ತಂಡದಲ್ಲಿ ಚಿಂತೆ ಮನೆ ಮಾಡಿತು. ರಾಯಲ್‌ ಚಾಲೆಂಜರ್ಸ್ ನ ಡಿ. ಪಡಿಕ್ಕಲ್ ೫೬(೪೨) ರನ್ನು ಹಾಗೂ ಎಬಿ ಡೀ ವಿಲಿಯರ್ಸ್ ೫೧ (೩೦) ರನ್ ಗಳಿಕೆ ಮಾಡಿ ತಂಡವನ್ನು ಗಟ್ಟಿಗೊಳಿಸಿದರು. ಅತಿ ನಿರೀಕ್ಷಿತ ಆಟಗಾರ, ತಂಡದ ನಾಯಕ ವಿರಾಟ್ ಕೊಹ್ಲಿಯವರು ಮಾತ್ರ ಕೇವಲ ೧೪ (೧೩) ರನ್ ಗಳಿಗೆ ಪೆವಿಲಿಯನ್ ಸೇರಿದರು. ರಾಯಲ್ ಚಾಲೆಂಜರ್ಸ್ ೨೦ ಓವರ್ ಗಳಲ್ಲಿ (೫ ವಿಕೆಟ್ ಗಳ ನಷ್ಟಕ್ಕೆ) ೧೬೩ ರನ್ ಗಳಿಸಿತು.

ನಂತರ ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಆಫ್ ಹೈದರಾಬಾದ್ ತಂಡದ ನಾಯಕ ಡಿ. ವಾರ್ನರ್ ಕೇವಲ ೬ ರನ್ ಗಳಸಿ‌ ರನ್ ಔಟ್ ಆದರು. ಇದರಿಂದ ಅಭಿಮಾನಿಗಳಿಗೆ ತೀರಾ ಪಿಚ್ಚೆನಿಸಿತು. ಆದರೆ ತಂಡಕ್ಕೆ ಬಲ ತಂದು ಕೊಟ್ಟದ್ದು, ಜೆ. ಬೋರ್ಸ್ಟೋವ್ ಅವರ ಬ್ಯಾಟಿಂಗ್. ೬೧(೪೩) ರನ್ ಗಳನ್ನ ಗಳಿಸಿ ತಂಡಕ್ಕೆ ಕೊಟ್ಟರು ಬೋರ್ಸ್ಟೋವ್. ಆದರೂ ತಂಡ ಅಂಕ ಗಿಟ್ಟಿಸಿಕೊಳ್ಳವಲ್ಲಿ ಬಹಳ ಶ್ರಮ ಪಟ್ಟಿತು. ಆದರೆ ಆ ಶ್ರಮ‌ ಫಲ‌ ನೀಡಲಿಲ್ಲ. ತಂಡವು ೧೦ ವಿಕೆಟ್ ಗಳ ನಷ್ಟಕ್ಕೆ ೧೫೩ ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ರಾಯಲ್ ಚಾಲೆಂಜರ್ಸ್ ನಯುಜೇಂದ್ರ ಚಹ್ವಾಲ್, ಉಮೇಶ್ ಯಾದವ್, ಶಿವಮ್ ದುಬೆ ಅವರ ಬೌಲಿಂಗ್ ಗೆ ಸನ್ ರೈಸರ್ಸ್ ಆಟಗಾರರು ಕಂಗಾಲಾದದ್ದಂತೂ ಸುಳ್ಳಲ್ಲ.

ಐಪಿಎಲ್ – ೨೦೨೦ರ ತನ್ನ ಮೊದಲ ಪಂದ್ಯದಲ್ಲಿ‌ ರಾಯಲ್ ಚಾಲೆಂಜರ್ಸ್ ಅತ್ಯಾಕರ್ಷಕವಾಗಿ ತನ್ನ ಪ್ರದರ್ಶನವನ್ನು ನೀಡಿದೆ. ಈ ಸಲ ಕಪ್ ನಮ್ಮದೇನಾ?

Team Newsnap
Leave a Comment
Share
Published by
Team Newsnap

Recent Posts

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024

SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More

May 17, 2024

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024