December 19, 2024

Newsnap Kannada

The World at your finger tips!

dks

ಬೆಂಗಳೂರು : ಡಿಕೆಶಿ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ

Spread the love

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಒಡೆತನದ ಬೆಂಗಳೂರಿನ ಆರ್ ಅರ್ ನಗರ ಶಾಲೆಗೆ ಬಾಂಬ್ ಬೆದರಿಕೆ ಬಂದಿದೆ.

ಆರ್‌ಆರ್ ನಗರದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್‌ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ.ಇದನ್ನು ಓದಿ –ಹಿರಿಯ ಕಾಂಗ್ರೆಸ್ಸಿಗ, ಮಾಜಿ MLC ಎಂ ಡಿ ರಮೇಶ್ ರಾಜು ನಿಧನ

ಸೋಮವಾರ ಶಾಲೆಯ ಇ-ಮೇಲ್ ಚೆಕ್ ಮಾಡಿದ ವೇಳೆ ಬೆದರಿಕೆ ಪತ್ರ ಬಂದಿರುವುದು ಪತ್ತೆಯಾಗಿದೆ.

ಬೆದರಿಕೆ ಪತ್ರ ಪತ್ತೆಯಾಗುತ್ತಲೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಮಕ್ಕಳನ್ನು ಶಾಲೆಯಿಂದ ಹೊರಗೆ ಕಳುಹಿಸಿ, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ.

ಮಕ್ಕಳೆಲ್ಲರೂ ಸೇಫ್ ಆಗಿದ್ದಾರೆ; ಯಾರು ಭಯಪಡಬೇಡಿ- ಡಿಕೆಶಿ ಪುತ್ರಿ ಐಶ್ವರ್ಯಾ

ಡಿಕೆಶಿ ಪುತ್ರಿ ಐಶ್ವರ್ಯಾ ಪೋಷಕರಿಗೆ ಪರಿಸ್ಥಿತಿಯ ಬಗ್ಗೆ ಹೇಳುತ್ತಿದ್ದಾರೆ. ಮಕ್ಕಳೆಲ್ಲರೂ ಸೇಫ್ ಆಗಿದ್ದಾರೆ. ಯಾರು ಭಯಪಡಬೇಡಿ ಒಂದು ಅರ್ಧ ಗಂಟೆ ಟೈಮ್ ಕೊಡಿ. ಎಲ್ಲವೂ ಸರಿ ಹೋಗುತ್ತೆ.ಯಾರೂ ಭಯ ಪಡೋ ಅವಶ್ಯಕತೆ ಇಲ್ಲ ಎಂದಿದ್ದಾರೆ.ನೀವು ಈ ರೀತಿ ಭಯ ಪಡ್ತಿರೋದ್ರಿಂದ ಮ್ಯಾನೇಜ್ಮೆಂಟ್ ಗೆ ಕಷ್ಟ ಆಗ್ತಿದೆ. ಕಂಟ್ರೋಲ್ ಮಾಡೋಕೆ ನಾವೂ ಎಲ್ಲ ಪ್ರಯತ್ನ ಮಾಡ್ತಿದೀವಿ ಎಂದು ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!