March 16, 2025

Newsnap Kannada

The World at your finger tips!

namma metro

ಬೆಂಗಳೂರು ಮೆಟ್ರೋ ದರ ಏರಿಕೆ: ಇಂದೇ ಅಂತಿಮ ನಿರ್ಧಾರ ಸಾಧ್ಯತೆ

Spread the love

ಬೆಂಗಳೂರು, ಜ. 17: ಸಾರಿಗೆ ದರ ಏರಿಕೆಯ ಬಳಿಕ, ಜನತೆ ಮೆಟ್ರೋ ಪ್ರಯಾಣ ದರ ಏರಿಕೆ ಶಾಕ್‌ಗೆ ಸಿದ್ಧರಾಗಬೇಕಾಗಿದೆ. ಬಿಎಂಆರ್‌ಸಿಎಲ್‌ ಮೆಟ್ರೋ ದರ ಪರಿಷ್ಕರಣೆ ಪ್ರಕ್ರಿಯೆಯನ್ನು ಕೊನೆಯ ಹಂತಕ್ಕೆ ತಂದು, ಇಂದು ಈ ಸಂಬಂಧ ಅಂತಿಮ ಸಭೆ ನಡೆಸುವ ಸಾಧ್ಯತೆಯಿದೆ.

ದರ ಏರಿಕೆಯ ಪ್ರಮಾಣ ನಿರ್ಧಾರ
ಸಭೆಯಲ್ಲಿ ಮೆಟ್ರೋ ಪ್ರಯಾಣ ದರವನ್ನು 5 ರಿಂದ 10 ರೂಪಾಯಿ ನಡುವೆ ಏರಿಸುವ ಬಗ್ಗೆ ಚರ್ಚೆ ನಡೆಯಲಿದೆ. ಜೊತೆಗೆ, ಹೊಸ ದರಗಳು ಯಾವ ದಿನದಿಂದ ಅನ್ವಯಿಸಲಿದೆ ಎಂಬುದರ ಮೇಲೂ ನಿರ್ಧಾರ ಕೈಗೊಳ್ಳಲಾಗುವ ಸಾಧ್ಯತೆ ಇದೆ. ಕಳೆದ ಏಳು ವರ್ಷಗಳಿಂದ ಮೆಟ್ರೋ ದರ ಹೆಚ್ಚಳ ಮಾಡಲಾಗಿರಲಿಲ್ಲ. ಆದರೆ, ಪ್ರಸ್ತುತ ದರ ಏರಿಕೆ ಅನಿವಾರ್ಯ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬೋರ್ಡ್‌ ಮೀಟಿಂಗ್‌ ಮೂಲಕ ಅಂತಿಮ ತೀರ್ಮಾನ
ಬೆಳಿಗ್ಗೆ 10 ಗಂಟೆಗೆ ನಡೆಯುವ ಸಭೆಯಲ್ಲಿ ಫೇರ್‌ ಹೈಕ್‌ ಫಿಕ್ಸೆಷನ್‌ ಕಮಿಟಿ ಮತ್ತು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಭಾಗವಹಿಸುವರು. ಕಮಿಟಿ 40% ರಿಂದ 45% ದರ ಏರಿಕೆಯ ಮೇಲೆ ಚಿಂತನೆ ನಡೆಸಿದ್ದು, ಅಂತಿಮ ವರದಿ ಮೇರೆಗೆ ದರ ಏರಿಕೆ ನಿರ್ಧಾರ ಕೈಗೊಳ್ಳಲಾಗುತ್ತದೆ.ಇದನ್ನು ಓದಿ –ಇನ್ಫೋಸಿಸ್ ವತಿಯಿಂದ 20,000 ಹೊಸ ಉದ್ಯೋಗಗಳಿಗೆ ಅವಕಾಶ

ಇತರ ನಗರಗಳ ಅಧ್ಯಯನ
ಫೇರ್‌ ಹೈಕ್‌ ಫಿಕ್ಸೆಷನ್‌ ಕಮಿಟಿ ಸಿಂಗಾಪುರ, ಹಾಂಗ್‌ಕಾಂಗ್‌, ದೆಹಲಿಯ ಮೆಟ್ರೋ ದರ ಪರಿಷ್ಕರಣೆ ಕ್ರಮಗಳ ಅಧ್ಯಯನ ಮಾಡಿದೆ. 2017 ರಲ್ಲಿ 10% – 15% ದರ ಹೆಚ್ಚಳ ಮಾಡಲಾಗಿತ್ತು. ಇದೀಗ ಮುಂದಿನ ಐದು ವರ್ಷಗಳಲ್ಲಿ ಮೆಟ್ರೋ 220 ಕಿಮೀ ವಿಸ್ತಾರಗೊಳ್ಳಲಿದ್ದು, ಬಡ್ಡಿ, ನಿರ್ವಹಣಾ ವೆಚ್ಚ, ಸಿಬ್ಬಂದಿ ವೇತನ ಸೇರಿದಂತೆ ಹಲವು ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 15% – 20% ದರ ಏರಿಕೆ ಅಗತ್ಯವಿದೆ ಎಂಬ ನಿರ್ಧಾರಕ್ಕೆ ಅಧಿಕಾರಿಗಳು ಬಂದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!