ಬೆಂಗಳೂರು ಕಂಬಳ : ಅನುಮತಿಯಿಲ್ಲದೆ ಬ್ಯಾನರ್ ಅಳವಡಿಸಿದಕ್ಕೆ 50 ಸಾವಿರ ದಂಡ

Team Newsnap
1 Min Read

ಬೆಂಗಳೂರು : ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕರಾವಳಿ ಪ್ರಸಿದ್ಧ ಕಂಬಳವನ್ನು ಆಯೋಜನೆ ಮಾಡಿದ್ದು ,ಕಂಬಳ ಆಯೋಜನೆ ಮಾಡಿದವರು ಬಿಬಿಎಂಪಿಯ ಜಾಹೀರಾತು ನಿಯಮವನ್ನು ಉಲ್ಲಂಘಸಿದ್ದರಿಂದ. BBMP ಆಯೋಜಕರಿಗೆ ದಂಡ ವಿಧಿಸಿದೆ.

ಅರಮನೆ ಮೈದಾನ ಹಾಗೂ ಮೈದಾನದ ಸುತ್ತಲಿನ ಪ್ರದೇಶದಲ್ಲಿ ಬ್ಯಾನರ್, ಬಂಟಿಂಗ್ಸ್ ಹಾಗೂ ಇತರೆ ಪ್ರದರ್ಶನಾ ಫಲಕಗಳನ್ನು ಅಳವಡಿಕೆ ಮಾಡಿ ಜಾಹೀರಾತು ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ BBMP ಅಧಿಕಾರಿಗಳು ಕಂಬಳ ಆಯೋಜಕರಿಗೆ ಬರೋಬ್ಬರಿ 50 ಸಾವಿರ ರೂ. ದಂಡವನ್ನು ವಿಧಿಸಿದ್ದಾರೆ. ಬೆಂಗಳೂರು ಕಂಬಳ : ಪದಕ ಗೆದ್ದ ಕಾಂತಾರ ಕೋಣಗಳು.

ಇನ್ನು ಕಂಬಳ ಆಯೋಜನೆ ಮಾಡಿರುವುದಕ್ಕೆ ಶುಭಾಶಯ ಕೋರಿ ವಿವಿಧ ನಾಯಕರು ಬ್ಯಾನರ್ ಹಾಗೂ ಬಂಟಿಂಗ್ಸ್‌ಗಳನ್ನು ಅಳವಡಿಕೆ ಮಾಡಿದ್ದರು. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳು ಕಂಬಳ ಆಯೋಜಕರಿಗೆ 50 ಸಾವಿರ ದಂಡ ವಿಧಿಸಿದ್ದಾರೆ. ಬಳ್ಳಾರಿ ರಸ್ತೆಯ ಪಕ್ಕದಲ್ಲಿ ಫ್ಲೈಕ್ಸ್ ಬ್ಯಾನರ್ ಹಾಕಲಾಗಿದೆ. ಈ ಕುರಿತು ಕಂಬಳ ಆಯೋಜಕರ ವಿರುದ್ಧ ಸದಾಶಿವ ನಗರ ಠಾಣೆಗೆ ದೂರು ದಾಖಲು ಮಾಡಲಾಗಿದೆ.

TAGGED:
Share This Article
Leave a comment