ತ್ಯಾಜ್ಯ ಸಂಗ್ರಹಣೆಯ ವಾಹನಗಳಿಗೆ ಕಸವನ್ನು ಹಾಕಲು ಬೆಂಗಳೂರಿಗರು ಬಹಳ ಹೊತ್ತು ಕಾಯಬೇಕಿತ್ತು. ವಾಹನ ಯಾವಾಗ ಬರುತ್ತದೋ ಏನೋ ಎಂದು ತಮ್ಮ ಕೆಲಸಗಳನ್ನು ಬಿಟ್ಟು ಕಾಯಬೇಕಿತ್ತು. ಈ ಸಮಸ್ಯೆಯ ನಿವಾರೆಣೆಗೆಂದೇ ಬಿಬಿಎಂಪಿ ಹೊಸ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದೆ.
ಈ ಮಾಹಿತಿಯನ್ನು ಸುದ್ದಿಗಾರರೊಡನೆ ಹಂಚಿಕೊಂಡ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ‘ಇನ್ನು ಮುಂದೆ ನಾಗರೀಕರು ತ್ಯಾಜ್ಯ ಸಂಗ್ರಹಣಾ ವಾಹನ ಯಾವ ಸ್ಥಳದಲ್ಲಿದೆ ಮತ್ತು ತಮ್ಮ ಸ್ಥಳದಿಂದ ಎಷ್ಟು ದೂರವಿದೆ ಎಂಬುದನ್ನು ಆ್ಯಪ್ ನ ಮುಖಾಂತರ ತಿಳಿಯಬಹುದಾಗಿದೆ’ ಎಂದಿದ್ದಾರೆ.
‘ಒಂದು ವೇಳೆ ತ್ಯಾಜ್ಯ ಸಂಗ್ರಹಣಾ ವಾಹನವು ಅವರ ಮನೆಯ ಕಸವನ್ನು ಹಾಕಿಸಿಕೊಳ್ಳುವದನ್ನು ತಪ್ಪಿಸಿದರೆ ಅಥವಾ ಇನ್ನ್ಯಾವುದೇ ದೂರುಗಳಿದ್ದಲ್ಲಿ ಜನರು ಆ್ಯಪ್ ನ ಮುಖಾಂತರವೇ ದೂರು ದಾಖಲಿಸಬಹುದಾಗಿದೆ’ ಎಂದಿದ್ದಾರೆ.
‘ನಮ್ಮ ತ್ಯಾಜ್ಯ, ನಮ್ಮ ಜವಾಬ್ದಾರಿ’ ಎಂಬ ಘೋಷಣೆಯೊಡನೆ ಬಿಬಿಎಂಪಿಯು ಪ್ರತಿಯೊಂದು ವಾರ್ಡ್ ನಲ್ಲಿ ಮಿಶ್ರಗೊಬ್ಬರ ಘಟಕವನ್ನು ಸ್ಥಾಪಿಸಲು ಯೋಚಿಸಿರುವ ಬಗ್ಗೆ ಹೇಳಿದ ಆಯುಕ್ತರು, ‘ಈ ಘಟಕವು ಹಸಿ ಕಸವನ್ನು ಮಿಶ್ರಗೊಬ್ಬರವನ್ನಾಗಿ ಪರಿವರ್ತಿಸುತ್ತದೆ’ ಎಂದಿದ್ದಾರೆ.
‘ಹಾಗೆಯೇ, ಸೀಗೆ ಹಳ್ಳಿ ಮತ್ತು ಕಮ್ಮನಹಳ್ಳಿಯ ಹತ್ತಿ ೧೦೦೦ ಕಿಲೋ ವ್ಯಾಟ್ ನ ಸ್ಥಾವರ ಘಟಕಗಳನ್ನು ಸ್ಥಾಪಿಸಲು ಬಿಬಿಎಂಪಿ ಯೋಜನೆ ರೂಪಿಸುತ್ತಿದೆ. ಅಲ್ಲದೆ, ಮಾವಳಿಪುರದಲ್ಲಿ ಎರಡು ಹಾಗೂ ದೊಡ್ಡಬಿದರುಕಲ್ಲಿನಲ್ಲಿ ಒಂದು ಸ್ಥಾವರಗಳನ್ನು ರೂಪಿಸುವ ಯೋಚನೆ ಇದೆ’ ಎಂದು ಆಯುಕ್ತರು ಹೇಳಿದರು.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು