ಬೆಂಗಳೂರು: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ (Expressway) ದ್ವಿಚಕ್ರ ವಾಹನಗಳ ಪ್ರವೇಶವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿಷೇಧಿಸಿದೆ. ಮಾ.2ರಂದು ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ (Bangarpete) ತಾಲೂಕಿನಲ್ಲಿ ಸಂಭವಿಸಿದ ಅಪಘಾತದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ಎಕ್ಸ್‌ಪ್ರೆಸ್‌ವೇ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಬಳಿ ಬೈಕ್‌ಗಳ ಪ್ರವೇಶವನ್ನು ನಿರ್ಬಂಧಿಸಲು ಗಸ್ತು ವಾಹನಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ, ಎಕ್ಸ್‌ಪ್ರೆಸ್‌ವೇನಲ್ಲಿ ಬೈಕ್ ಸವಾರರು ಪ್ರವೇಶಿಸದಂತೆ ಸೂಚಿಸುವ ಸೈನ್‌ಬೋರ್ಡ್‌ಗಳನ್ನು ಅಳವಡಿಸುವ ಕಾರ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ.
ಎಕ್ಸ್‌ಪ್ರೆಸ್‌ವೇನಲ್ಲಿ ಬೈಕ್ ಸವಾರರಿಗೆ ನಿಷೇಧ ಏಕೆ?
ಭಾರತದ ಯಾವುದೇ ಎಕ್ಸ್‌ಪ್ರೆಸ್‌ವೇಗಳಲ್ಲೂ ದ್ವಿಚಕ್ರ ವಾಹನಗಳಿಗೆ ಪ್ರವೇಶಕ್ಕೆ ಅನುಮತಿ ಇಲ್ಲ. ಈ ರಸ್ತೆಗಳನ್ನು ಗರಿಷ್ಠ 120 ಕಿ.ಮೀ. ವೇಗದಲ್ಲಿ ವಾಹನ ಚಲಿಸಲು ವಿನ್ಯಾಸಗೊಳಿಸಲಾಗಿದೆ. ಹೀಗಾಗಿ, ಇತರ ವಾಹನಗಳು ಹೆಚ್ಚಿನ ವೇಗದಲ್ಲಿ ಸಾಗುವ ಸಂದರ್ಭಗಳಲ್ಲಿ ಬೈಕ್ ಸವಾರರು ಈ ಮಾರ್ಗದಲ್ಲಿ ಸಂಚರಿಸುವುದು ಅಪಾಯಕಾರಿಯಾಗಬಹುದು. ಇದು ಅವರ ಜೀವಗಳಿಗೆ ಮತ್ತು ಇತರ ವಾಹನ ಸವಾರರ ಸುರಕ್ಷತೆಗೆ ಅಪಾಯವನ್ನು ಉಂಟು ಮಾಡಬಹುದು.
ಈ ಹೆದ್ದಾರಿಯು ಪ್ರಯಾಣಿಕರಿಗೆ ವೇಗವಾಗಿ, ಸುಲಭವಾಗಿ ಸಂಚಾರ ಮಾಡಲು ನಿರ್ಮಾಣ ಮಾಡಲಾಗಿದೆ. ಆದರೆ, ಅನೇಕ ಬೈಕ್ ಸವಾರರು ಹೊಸ ಅನುಭವಕ್ಕಾಗಿ ಈ ಹೈವೇ ಮೇಲೆ ಪ್ರಯಾಣಿಸುತ್ತಿದ್ದಾರೆ, ಇದರಿಂದ ಅಪಘಾತದ ಭೀತಿ ಹೆಚ್ಚಾಗಿದೆ. ಜೀವಗಳು ಅಮೂಲ್ಯವಾಗಿರುವ ಕಾರಣ, ಬೈಕ್ ಸವಾರರು ಈ ಮಾರ್ಗದಲ್ಲಿ ಸಂಚರಿಸಬಾರದು ಎಂದು ಎನ್‌ಹೆಚ್‌ಎಐ ಮನವಿ ಮಾಡಿದೆ.ಇದನ್ನು ಓದಿ –ಏಕದಿನ ಕ್ರಿಕೆಟ್‌ಗೆ ಸ್ಟೀವ್ ಸ್ಮಿತ್ ವಿದಾಯ: ಆಸ್ಟ್ರೇಲಿಯಾ ಬ್ಯಾಟಿಂಗ್ ದಿಗ್ಗಜನ ನಿವೃತ್ತಿ ಘೋಷಣೆ
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಪ್ರಗತಿ
- 68 ಕಿ.ಮೀ. ಮಾರ್ಗವನ್ನು ಕಳೆದ ತಿಂಗಳು ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ತೆರೆಯಲಾಯಿತು.
- ಕರ್ನಾಟಕದಲ್ಲಿ 71 ಕಿ.ಮೀ. ಎಕ್ಸ್‌ಪ್ರೆಸ್‌ವೇ ಮಾರ್ಗದ ನಿರ್ಮಾಣವನ್ನು ಎನ್‌ಹೆಚ್‌ಎಐ ಪೂರ್ಣಗೊಳಿಸಿದೆ.
- ಹೊಸಕೋಟೆಯಿಂದ ಚೆನ್ನೈನ ಶ್ರೀಪೆರಂಬುದೂರಿನವರೆಗೆ 260 ಕಿ.ಮೀ. ಎಕ್ಸ್‌ಪ್ರೆಸ್‌ವೇ ಆಂಧ್ರಪ್ರದೇಶ ಮತ್ತು ತಮಿಳುನಾಡು ವ್ಯಾಪ್ತಿಗೆ ಬರುತ್ತದೆ. ಈ ಮಾರ್ಗವನ್ನು ಈ ವರ್ಷಾಂತ್ಯದೊಳಗೆ ಸಾರ್ವಜನಿಕರಿಗೆ ತೆರೆಯುವ ನಿರೀಕ್ಷೆಯಿದೆ.
- ಕರ್ನಾಟಕದ ವ್ಯಾಪ್ತಿಯೊಳಗೆ, ಈ ಹೆದ್ದಾರಿಯು ಜನರಿಗೆ ಹೊಸಕೋಟೆ, ಮಾಲೂರು, ಕೆಜಿಎಫ್ ಮತ್ತು ಇತರ ಸ್ಥಳಗಳಿಗೆ ತಲುಪಲು ಅನುಕೂಲ ಮಾಡಿಕೊಡಲಿದೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು