December 26, 2024

Newsnap Kannada

The World at your finger tips!

dj

ಬೆಂಗಳೂರನಲ್ಲಿ ಡಿ 31 ರಾತ್ರಿ ಹೊಸ ವರ್ಷಾಚರಣೆಗೆ ಕಠಿಣ ಕಡಿವಾಣ

Spread the love

ಹೊಸ ವರ್ಷಾಚರಣೆಗೆ ಬ್ರೇಕ್​ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರ ನೈಟ್​ ಕರ್ಫ್ಯೂ ಜಾರಿಯ ಕ್ರಮವನ್ನು ಕೈ ಬಿಟ್ಟು ಈಗ ಕೇವಲ ಡಿ 31 ರಾತ್ರಿ ಸೆಕ್ಷನ್ 144 ಜಾರಿ ಮಾಡಲು ನಿರ್ಧರಿಸಲಾಗಿದೆ.

ಬೆಂಗಳೂರು ಪೊಲೀಸ್​ ಆಯುಕ್ತ ಕಮಲ್​ ಪಂತ್​ ಸುದ್ದಿಗೋಷ್ಠಿ ನಡೆಸಿ, ಹೊಸ ವರ್ಷದ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದರು.

  • 31ರ ರಾತ್ರಿ ಬೆಂಗಳೂರಲ್ಲಿ ಸೆಕ್ಷನ್​ 144 ಜಾರಿಯಲ್ಲಿರುತ್ತದೆ.
  • ಯಾರೊಬ್ಬರೂ ಸಾರ್ವಜನಿಕ ಪ್ರದೇಶದಲ್ಲಿ ಗುಂಪು ಸೇರುವಂತಿಲ್ಲ.
  • ಯಾವುದೇ ರಸ್ತೆಗಳ ಮೇಲೆ ಸೆಲೆಬ್ರೇಷನ್​ ಮಾಡಲು ಅವಕಾಶ ಇರುವುದಿಲ್ಲ. ಖಾಸಗಿ ಕ್ಲಬ್​ಗಳು, ಅಪಾರ್ಟ್ಮೆಂಟ್​ಗಳಲ್ಲಿ ನಿವಾಸಿಗಳು ಹೊಸ ವರ್ಷ ಆಚರಣೆ ಮಾಡಬಹುದು.
  • ಬ್ಯಾಂಡ್, ಮ್ಯೂಸಿಕ್ ಕಾರ್ಯಕ್ರಮ ಗಳನ್ನು ಆಯೋಜಿಸುವಂತಿಲ್ಲ.
  • ಹೊಸ ವರ್ಷಾಚರಣೆ ವೇಳೆ ಡಿಜೆ ವ್ಯವಸ್ಥೆಗೆ ಅವಕಾಶವಿಲ್ಲ
  • ರೆಸ್ಟೋರೆಂಟ್, ಪಬ್, ಕ್ಲಬ್​ಗಳಲ್ಲಿ ಕಡ್ಡಾಯವಾಗಿ ಕೊವಿಡ್​-19 ನಿಯಮಗಳನ್ನು ಪಾಲಿಸಬೇಕು.
  • ಗ್ರಾಹಕರಿಗೆ ಅಡ್ವಾನ್ಸ್ ಬುಕಿಂಗ್​ಗೆ ಅವಕಾಶ ನೀಡಬೇಕು. ಪಬ್​ ಹಾಗೂ ರೆಸ್ಟೋರೆಂಟ್​ಗಳಲ್ಲಿ ಶೇ.50ರಷ್ಟು ಗ್ರಾಹಕರು ಬರಲು ಮಾತ್ರ ಅವಕಾಶ ನೀಡಬೇಕು.
  • ಕೂಪನ್ ಪಡೆದ ಗ್ರಾಹಕರು ಮಾತ್ರ ಹೋಟೆಲ್​​ ಒಳಗೆ ಇರಬೇಕು. ಅವರು ರಸ್ತೆಗೆ ಬಂದು ಸೆಲಬ್ರೇಷನ್​ ಮಾಡಬಾರದು
  • ರಾತ್ರಿ ಕಚೇರಿಯಿಂದ ಮನೆಗೆ ತೆರಳುವವರಿದ್ದರೆ, ಆಸ್ಪತ್ರೆಗೆ ಹೋಗುವವರಿದ್ದರೆ ಇಲ್ಲವೆ ಇತರೆ ಯಾವುದೇ ಅಗತ್ಯ ಸೇವೆಗಾಗಿ ಸಂಚಾರ ನಡೆಸಬಹುದು
  • ರಾತ್ರಿ ಜಾಲಿ ರೈಡ್​ ಉದ್ದೇಶ ಇಟ್ಟುಕೊಂಡು ಸಂಚಾರ ನಡೆಸಿದರೆ
    ವಾಹನ ಜಪ್ತಿ ಲೈಸನ್ಸ್ ರದ್ದು ಮಾಡಲಾಗುವುದು.
  • ಬೆಂಗಳೂರು ನಗರಾದ್ಯಂತ ಡಿ 31 ರಂದು ರಾತ್ರಿ ಡ್ರಂಕ್ ಮತ್ತು ಡ್ರೈವ್ ತಪಾಸಣೆ ಮಾಡುತ್ತೇವೆ.
  • ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಕೆಲವರು ಫ್ಲೈಓವರ್​ಗಳ ಮೇಲೆ ವಾಹನ ನಿಲ್ಲಿಸಿ ಗಲಾಟೆ ಮಾಡುತ್ತಾರೆ. ಇದಕ್ಕೆ ಬ್ರೇಕ್​ಹಾಕುವ ಉದ್ದೇಶದಿಂದ ಡಿ.31ರಂದು ರಾತ್ರಿ 8 ಗಂಟೆಯಿಂದ ಫ್ಲೈಓವರ್​ಗಳು ಬಂದ್​ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.
Copyright © All rights reserved Newsnap | Newsever by AF themes.
error: Content is protected !!