ಬೆಸ್ಕಾಂ, ಬಿಬಿಎಂಪಿ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಸ್ಪರ್ಶಿಸಿ ಯುವತಿ ಸಾವನ್ನಪ್ಪಿರುವ ಘಟನೆ ವೈಟ್ಫೀಲ್ಡ್ ಸಮೀಪದ ಸಿದ್ದಾಪುರದಲ್ಲಿ ಕಳೆದ ರಾತ್ರಿ ಸಂಭವಿಸಿದೆ.
ಅಖಿಲ (23) ವಿದ್ಯುತ್ ಸ್ಪರ್ಶಿಸಿ ಯುವತಿ ಸಾವನ್ನಪ್ಪಿದ್ದಾಳೆ. ನಿನ್ನೆ ರಾತ್ರಿ 9ಗಂಟೆಗೆ ನಡೆದ ಈ ಘಟನೆಯಲ್ಲಿ ಮಗಳನ್ನು ಕಳೆದುಕೊಂಡ ಕುಟುಂಬಸ್ಥರು ಬಿಬಿಎಂಪಿ ಹಾಗೂ ಬೆಸ್ಕಾಂಗೆ ಶಾಪ ಹಾಕಿದರು.
ಬಿಕಾಂ ಪದವೀಧರೆಯಾಗಿದ್ದ ಅಖಿಲ, ಖಾಸಗಿ ಶಾಲೆ ಒಂದರ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.
ನಿನ್ನೆ ರಾತ್ರಿ 8 ಗಂಟೆಗೆ ಶಾಲೆಯಲ್ಲಿ ಕೆಲಸ ಮುಗಿಸಿ ರಾತ್ರಿ 8.30ಕ್ಕೆ ಸಿದ್ದಾಪುರ ಬಳಿಯಿರುವ ಮಯೂರ ಬೇಕರಿ ಸಮೀಪ ಹೊಂಡಾ ಆ್ಯಕ್ಟೀವಾ ಬೈಕ್ನಲ್ಲಿ ಬರುತ್ತಿದ್ದರು.
ರಸ್ತೆಯಲ್ಲಿ ಮಂಡಿಯುದ್ದಕ್ಕೆ ನೀರು ನಿಂತಿತ್ತು. ನೀರಿನ ಮಧ್ಯೆಯೇ ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿರುವಾಗ, ಬೈಕ್ ಏಕಾಏಕಿ ಬಂದ್ ಆಗಿದೆ. ಮಾತ್ರವಲ್ಲ, ಬ್ಯಾಲೆನ್ಸ್ ತಪ್ಪಿ ಬೈಕ್ ಬೀಳುವ ಹಂತಕ್ಕೆ ಬಂದಿತ್ತು. ಆಗ ತನ್ನ ಬಲ ಭಾಗದಲ್ಲಿದ್ದ ಎಲೆಕ್ಟ್ರಿಕಲ್ ಪೋಲ್ ಮುಟ್ಟಿದ್ದಾಳೆ. ವಿದ್ಯುತ್ ಸ್ಪರ್ಷಿಸಿ ಯುವತಿ ಕೊನೆಯುಸಿರು ಎಳೆದಿದ್ದಾರೆ.
ವಿದ್ಯುತ್ ಕಂಬಗಳ ಸರಿಯಾದ ನಿರ್ವಹಣೆ ಆಗದೇ ಇರುವುದು ಯುವತಿ ಸಾವಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
More Stories
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ