January 5, 2025

Newsnap Kannada

The World at your finger tips!

20026aec 698d 447d 8c14 40e21c72ac12

ಪುನರ್ಜನ್ಮದ ನಂಬಿಕೆ : ಇಬ್ಬರು ಹೆಣ್ಣು ಮಕ್ಕಳನ್ನು ಬಲಿಕೊಟ್ಟ ಪೋಷಕರು

Spread the love

ದೇವರು ಆಗ್ರಹ ಮಾಡಿದ್ದಾನೆ ಎಂದು ಇಬ್ಬರು ಹೆಣ್ಣು ಮಕ್ಕಳನ್ನು ಬಡಿದು ಕೊಂದ ಪೋಷಕರು, ಪುನರ್ಜನ್ಮ ಬರುತ್ತದೆ ಎಂಬ ಮೂಢ ನಂಬಿಕೆಯಿಂದ ಹೆತ್ತ ಮಕ್ಕಳನ್ನು ಬಲಿಕೊಟ್ಟ ಘಟನೆ ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ಜರುಗಿದೆ.

ಕಲಿಯುಗ ಅಂತ್ಯವಾಗಲಿದೆ. ಸತ್ಯಯುಗ ಆರಂಭವಾಗಲಿದೆ. ಈ ಸಂದರ್ಭದಲ್ಲಿ ನಿಮ್ಮ ಮಕ್ಕಳನ್ನು ಬಲಿಕೊಡುವುದರಿಂದ ಸತ್ಯ ಯುಗದಲ್ಲಿ ಪುನರ್ಜನ್ಮವಾಗುತ್ತದೆ ಎನ್ನುವ ದೈವ ಸಂದೇಶ ಬಂದಿದೆ ವಾಮಾಚಾರ ಮಾಡುವ ವ್ಯಕ್ತಿ ನಂಬಿ ಅತೀ ವಿದ್ಯಾವಂತರಾದ ಪೋಷಕರೆ
ಈ ಕೃತ್ಯಮಾಡಿದ್ದಾರೆ.

ಅಲೈಕ್ಯ (27) ಮತ್ತು ದಿವ್ಯ( 22) ಇಬ್ಬರು ಹೆಣ್ಣು ಮಕ್ಕಳನ್ನು ವಿದ್ಯಾವಂತ ದಂಪತಿ ಬಡಿದು ಕೊಂದಿದ್ದಾರೆ.

ಮದನಪಲ್ಲಿ ಪುರುಷೋತ್ತಮ ನಾಯ್ಡು ಮತ್ತು ಪದ್ಮಜಾ ಎಂಬುವವರು ಬಲಿ ತೆಗೆದುಕೊಂಡ ಈ ಪೋಷಕರು ಬೇರೆ ಬೇರೆ ಕಾಲೇಜುಗಳಲ್ಲಿ ಉಪ ಪ್ರಾಂಶುಪಾಲರಾಗಿದ್ದಾರೆ.

ಇಬ್ಬರಿಗೂ ಮೂಢನಂಬಿಕೆಯುಳ್ಳ ಪೋಷಕರು. ಅಲೈಕ್ಯ ಹಿರಿಯ ಮಗಳು ಸ್ನಾತಕೋತ್ತರ ಪದವೀಧರೆ, ಕಿರಿಯ ಮಗಳು ದಿವ್ಯ ಬಿಬಿಎ ಓದಿ ಸಂಗೀತಾಭ್ಯಾಸ ಮಾಡುತ್ತಿದ್ದಾರೆ.

ಕೊರೋನಾ ನಂತರ ಎಲ್ಲರೂ ಹೊರವಲಯದಲ್ಲಿರುವ ಅಪಾರ್ಟ್ ಮೆಂಟ್ ಮನೆಯಲ್ಲೇ ಇರುತ್ತಿದ್ದರು. ನಿನ್ನೆ ರಾತ್ರಿ ಮನೆಯಲ್ಲಿ ಜೋರಾದ ಶಬ್ದ ಬಂದ ಹಿನ್ನೆಲೆಯಲ್ಲಿ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬಂದರೆ ದಂಪತಿ ಒಳ ಪ್ರವೇಶಿಸಲು ಅವಕಾಶ ನೀಡಲಿಲ್ಲ. ನಂತರ ಒತ್ತಾಯಪೂರ್ವಕವಾಗಿ ಪೊಲೀಸರು ಒಳಗೆ ಹೋಗಿ ನೋಡಿದಾಗ ಒಂದೊಂದು ಕೋಣೆಯಲ್ಲಿ ಒಬ್ಬೊಬ್ಬ ಮಕ್ಕಳನ್ನು ಬಡಿದು ಕೊಂದು, ಕೆಂಪು ಬಟ್ಟೆಯಲ್ಲಿ ಸುತ್ತಿಡಲಾಗಿದೆ. ಸುತ್ತಲೂ ಪೂಜಾ ಸಾಮಗ್ರಿ ಇಡಲಾಗಿತ್ತು.

ಇಬ್ಬರಿಗೂ ನಾಳೆ ಪುನರ್ಜನ್ಮವಾಗುತ್ತದೆ. ಹಾಗಾಗಿ ಶವವನ್ನು ಅಲ್ಲಿಂದ ತೆಗೆಯಬಾರದು ಎಂದು ದಂಪತಿ ಪಟ್ಟು ಹಿಡಿದಿದ್ದಾರೆ. ಆದರೂ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!