February 21, 2026

Newsnap Kannada

The World at your finger tips!

rayanna 1

ಬೆಳಗಾವಿ: ವಿರೂಪಗೊಂಡಿದ್ದ ರಾಯಣ್ಣನ ಪ್ರತಿಮೆ ಮರುಸ್ಥಾಪನೆ

Spread the love

ಬೆಳಗಾವಿಯ ಅನಗೋಳದಲ್ಲಿ ದುಷ್ಕರ್ಮಿಗಳಿಂದ ವಿರೂಪಗೊಂಡಿದ್ದ ವೀರ ಕನ್ನಡಿಗ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಮರು ಸ್ಥಾಪನೆ ಮಾಡಲಾಗಿದೆ.

ಮೊನ್ನೆ ರಾತ್ರಿ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಮೂರ್ತಿಯನ್ನು ವಿರೂಪಗೊಳಿಸಿದ್ದರು.

ಸದ್ಯ ಅದೇ ಮೂರ್ತಿಯನ್ನು ಪೊಲೀಸರು ರಿಪೇರಿ ಮಾಡಿ ನೀಡಿದ್ದು ಮೊದಲಿನ ಜಾಗದಲ್ಲಿಯೇ ಮರು ಪ್ರತಿಷ್ಠಾಪಿಸಲಾಗಿದೆ.

rayanna2

ಕುಂಭಮೇಳದೊಂದಿಗೆ ರಾಯಣ್ಣನ ಮೂರ್ತಿಗೆ ಕ್ಷಿರಾ ಅಭಿಷೇಕ ಮಾಡಿ. ಪೂಜೆ ಸಲ್ಲಿಸಿ ಗ್ರಾಮದ ಜನತೆ, ರಾಯಣ್ಣನ ಅಭಿಮಾನಿಗಳು ಮತ್ತು ಪೊಲೀಸರ ಸಮ್ಮುಖದಲ್ಲಿ ಮೂರ್ತಿಯನ್ನು ಅದ್ಧೂರಿಯಾಗಿ ಮರು ಪ್ರತಿಷ್ಠಾಪಿಸಲಾಗಿದೆ.

error: Content is protected !!