January 14, 2026

Newsnap Kannada

The World at your finger tips!

Compensation , journalist , haveri

CM gave compensation of 3 lakhs to journalist Ramumudi Gowda's family ಪತ್ರಕರ್ತ ರಾಮುಮುದಿಗೌಡರ ಕುಟುಂಬಕ್ಕೆ 3 ಲಕ್ಷ ರು ಪರಿಹಾರ ನೀಡಿದ ಸಿಎಂ

ಬೆಳಗಾವಿಯಲ್ಲಿ ಅಪಘಾತ- ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಸಿಎಂ ಪ್ರಕಟ

Spread the love

ಬೆಳಗಾವಿ ತಾಲೂಕಿನ ಕಲ್ಯಾಳ್ ಬ್ರಿಡ್ಜ್ ಬಳಿ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ಸರ್ಕಾರದಿಂದ ತಲಾ 5 ಲಕ್ಷ ಹಾಗೂ ಜಿಲ್ಲಾಡಳಿತದಿಂದ ಎರಡು ಲಕ್ಷ ಪರಿಹಾರ ನೀಡಲಾಗುವುದು

accident,death,belagavi

ಈ ವಿಷಯವನ್ನು ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಈ ಅಪಘಾತದಲ್ಲಿ 7 ಜನ ಮೃತಪಟ್ಟಿದ್ದು, ಅನೇಕರಿಗೆ ಗಾಯ ಆಗಿರುವ ಬಗ್ಗೆ ಮಾಹಿತಿ ಬಂದಿದೆ.ಇದನ್ನು ಓದಿ –‘ಕೋಟಿಗೊಬ್ಬ–3’ ನಿರ್ಮಾಪಕ ಸೂರಪ್ಪ ಬಾಬು ಕಾರು ಅಪಘಾತ

ಮೃತರೆಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ಮೃತರ ಕುಟುಂಬಸ್ಥರಿಗೆ ತಲಾ ಐದು ಲಕ್ಷ ಪರಿಹಾರ ನೀಡಲಾಗುತ್ತದೆ. ಹಾಗೂ ಜಿಲ್ಲಾಡಳಿತದಿಂದ ಎರಡು ಲಕ್ಷ ಪರಿಹಾರ ನೀಡುವುದರ ಜೊತೆಗೆ ಗಾಯಗಳು ಸಂಪೂರ್ಣ ವೆಚ್ಚ ಭರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಹಲವರಿಗೆ ಗಂಭೀರ ಗಾಯಗಳಾಗಿದೆ. ಇಂದು ನಸುಕಿನ ಜಾವ ನಡೆದಿರುವ ಭೀಕರ ಅಪಘಾತಕ್ಕೆ ನಿದ್ರೆಯ ಮಂಪರಿನಲ್ಲಿದ್ದ ಚಾಲಕನ ನಿರ್ಲಕ್ಷ್ಯತನವೇ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಮಾರೀಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!