ಆಶ್ವಯುಜ ಮಾಸದ ಶುಕ್ಲ ಪಾಡ್ಯಮಿಯಿಂದ ದಶಮಿಯವರೆಗೂ ಒಂಭತ್ತು ದಿನಗಳ ಕಾಲ ಆಚರಿಸಲ್ಪಡುವ ಹಬ್ಬ ನವರಾತ್ರಿ. ನವರಾತ್ರಿಯ ಈ ದಿನಗಳಲ್ಲಿ ದುರ್ಗಾಮಾತೆಯನ್ನು ನವ ಅವತಾರಗಳಲ್ಲಿ ಪೂಜಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ.
ನವರಾತ್ರಿಯ ಒಂಭತ್ತು ದಿನಗಳು ದೇವಿಯ ಒಂಭತ್ತು ಸ್ವರೂಪಗಳ ಆರಾಧನೆಯಾಗಿರುತ್ತದೆ. ದೇವಿಯ ಪ್ರತಿಯೊಂದು ಸ್ವರೂಪದ ಆರಾಧನೆಯಿಂದ ವಿಶಿಷ್ಟ ಫಲಗಳನ್ನು ಪಡೆಯಬಹುದಾಗಿದೆ.
ನವರಾತ್ರಿ ಶುಭ ಮುಹೂರ್ತದಲ್ಲಿ ಕಲಶ ಸ್ಥಾಪನೆ:
ದೇವಿ ನವರಾತ್ರಿಯ ಮೊದಲ ದಿನದಂದು ದೇವಿಯ ಪೂಜೆಗಾಗಿ ಕಲಶವನ್ನು ಸ್ಥಾಪಿಸಲಾಗುತ್ತದೆ. ಶಕ್ತಿ ಆರಾಧನೆಯ ಭಾಗವಾಗಿ ಈ ಕಲಶವನ್ನು ಒಂಬತ್ತು ದಿನಗಳ ಕಾಲ ಪೂಜಿಸಲಾಗುತ್ತದೆ. ದೇವಿ ಶರನ್ನವರಾತ್ರಿಯ ಮೊದಲ ದಿನ ಅಕ್ಟೋಬರ್ 15 ರಂದು ಬೆಳಿಗ್ಗೆ 11 :44 ರಿಂದ ಮಧ್ಯಾಹ್ನ 12:30 ರವರೆಗೆ ಕಲಶವನ್ನು ಸ್ಥಾಪಿಸಲು ಶುಭ ಸಮಯ.
- ಅಕ್ಟೋಬರ್ 15 – ಘಟಸ್ಥಾಪನ, ಶೈಲಪುತ್ರಿ ದೇವಿ ಪೂಜೆ
- ಅಕ್ಟೋಬರ್ 16 – ಬ್ರಹ್ಮಚಾರಿಣಿ ಪೂಜೆ
- ಅಕ್ಟೋಬರ್ 17 – ಸಿಂಧೂರ್ ತೃತೀಯ, ಚಂದ್ರಘಂಟ ಪೂಜೆ
- ಅಕ್ಟೋಬರ್ 18 – ಕೂಷ್ಮಾಂಡ ಪೂಜೆ, ವಿನಾಯಕ ಚತುರ್ಥಿ
- ಅಕ್ಟೋಬರ್ 19 – ಸ್ಕಂದಮಾತಾ ಪೂಜೆ
- ಅಕ್ಟೋಬರ್ 20 – ಕಾತ್ಯಾಯಿನಿ ಪೂಜೆ
- ಅಕ್ಟೋಬರ್ 21 – ಸರಸ್ವತಿ ಪೂಜೆ, ಕಾಳರಾತ್ರಿ ಪೂಜೆ (ಸಪ್ತಮಿ)
- ಅಕ್ಟೋಬರ್ 22 – ದುರ್ಗಾ ಅಷ್ಟಮಿ, ಮಹಾಗೌರಿ ಪೂಜೆ, ಸಂಧಿ ಪೂಜೆ
- ಅಕ್ಟೋಬರ್ 23 – ದುರ್ಗಾ ಮಹಾ ನವಮಿ
- ಅಕ್ಟೋಬರ್ 24 – ನವರಾತ್ರಿ ಪಾರಣ, ದುರ್ಗಾ ವಿಸರ್ಜನೆ, ವಿಜಯದಶಮಿ
ಇದನ್ನು ಓದಿ –ಹೊಸಪೇಟೆ ಬಳಿ ಭೀಕರ ಅಪಘಾತ- ಒಂದೇ ಕುಟುಂಬದ 7 ಮಂದಿ ಸಾವು
ನವರಾತ್ರಿಯ ಮೊದಲ ದಿಂದ ಒಂಬತ್ತು ದಿನಗಳ ಕಾಲ ಉಪವಾಸ ಮಾಡಿ ಶುಭ ಸಮಯದಲ್ಲಿ ಆಚರಣೆಗಳ ಪ್ರಕಾರ ಕಲಶವನ್ನು ಸ್ಥಾಪಿಸುತ್ತಾರೆ. ದುರ್ಗಾ ಮಾತೆಗೆ ಹೂವುಗಳು, ಹಣ್ಣುಗಳು ಇತ್ಯಾದಿಗಳನ್ನು ಅರ್ಪಿಸುವುದು, ಮಂತ್ರ ಸ್ತೋತ್ರಗಳಿಂದ ದುರ್ಗಾದೇವಿಯನ್ನು ಪೂಜಿಸಿ, ಪ್ರತಿದಿನ ದುರ್ಗಾ ಸಪ್ತಶತಿಯನ್ನು ಪಠಿಸಿ, ಈ ಒಂಬತ್ತು ದಿನಗಳ ಕಾಲ ದೇವಿಯನ್ನು ಪೂಜಿಸುತ್ತಾರೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ