ನಿವೃತ್ತ ನ್ಯಾಯಮೂರ್ತಿ ಜೈಸ್ವಾಲ್ ನೇತೃತ್ವದ ಮೂವರು ಸದಸ್ಯರ ಸಮಿತಿ ನೀಡಿದ ವರದಿಯ ಆಧಾರದ ಮೇಲೆ ಅಬಕಾರಿ ಇಲಾಖೆ ಬಿಯರ್ ಬೆಲೆ ಹೆಚ್ಚಳದ ಪ್ರಸ್ತಾವನೆಗೆ ಅನುಮೋದನೆ ನೀಡಿ ಹೊಸ ಆದೇಶ ಹೊರಡಿಸಿದೆ. ಈ ಹೆಚ್ಚಿದ ದರಗಳು ಇಂದು (ಮಂಗಳವಾರ)ದಿಂದಲೇ ಜಾರಿಗೆ ಬರಲಿವೆ.
ಈ ಬಾರಿಯ ಹೆಚ್ಚಳದಲ್ಲಿ ಶೇಕಡಾ 15 ರಷ್ಟು ದರ ಏರಿಕೆಯಾಗಿದೆ. ಇದರಿಂದಾಗಿ:
- ಲೈಟ್ ಬಿಯರ್: ಹಿಂದಿನ ದರ ₹150 ಇದ್ದು, ಈಗ ₹180 ಆಗಲಿದೆ.
- ಸ್ಟ್ರಾಂಗ್ ಬಿಯರ್: ಹಿಂದಿನ ದರ ₹160 ಇದ್ದು, ಈಗ ₹200 ಆಗಲಿದೆ.
ಕೇಸ್ ದರ:
- ಲೈಟ್ ಬಿಯರ್ ಕೇಸ್ – ₹2160
- ಸ್ಟ್ರಾಂಗ್ ಬಿಯರ್ ಕೇಸ್ – ₹2400
ಇದನ್ನು ಓದಿ –ಮೈಸೂರಿನಲ್ಲಿ ಹೊಸ ಹೋಟೆಲ್ ಆರಂಭಿಸಲು ತಾಜ್ ಗ್ರೂಪ್ ಸಿದ್ಧ
ಈ ಬಿಯರ್ ದರ ಹೆಚ್ಚಳದಿಂದ ರಾಜ್ಯ ಸರ್ಕಾರಕ್ಕೆ ತಿಂಗಳಿಗೆ ಸುಮಾರು ₹300 ಕೋಟಿ ಆದಾಯ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಮುಂಬರುವ ಬೇಸಿಗೆ ಮತ್ತು ಐಪಿಎಲ್ ಟೂರ್ನಿಯ ಕಾರಣದಿಂದ ಬಿಯರ್ ಮಾರಾಟವು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು