ಸಾಮಾನ್ಯವಾಗಿ ಚಿತ್ರರಂಗದಲ್ಲಿರುವ ಅದರಲ್ಲೂ ನಾಯಕಿಯರಾಗಿ ಚಲಾವಣೆಯಲ್ಲಿರುವವರು ಸೌಂದರ್ಯಕ್ಕೆ ಒತ್ತುಕೊಡುತ್ತಾರೆ ಎನ್ನುವುದು ತಿಳಿದಿರುವ ವಿಷಯವೇ. ಆದರೆ ಒಂದು ಕಾಲದಲ್ಲಿ ಗ್ಲಾಮರಸ್ ಆಗಿ ಚಿತ್ರಗಳಲ್ಲಿ ಕಾಣಿಸಿಕೊಂಡು, ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ನಟಿ ರಮ್ಯಾ ಈಗ ಆರೋಗ್ಯದ ಬಗ್ಗೆ ಮಾತನಾಡಲು ಹೊರಟಿದ್ದಾರೆ.
ನನಗೆ ಸೌಂದರ್ಯಕ್ಕಿಂತ ಆರೋಗ್ಯನೇ ಮುಖ್ಯ ಎಂದು ಹೇಳಿಕೊಂಡಿದ್ದಾರೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ. ಜತೆಗೆ ಆರೋಗ್ಯಕ್ಕೆ ಹೆಣ್ಣುಮಕ್ಕಳು ಹೆಚ್ಚಿನ ನಿಗಾ ಕೊಡಬೇಕೆನ್ನುವ ಸಲಹೆ ನೀಡಿದ್ದಾರೆ.ಆರೋಗ್ಯವೇ ಸಂಪತ್ತು. ಆರೋಗ್ಯದ ಬಗ್ಗೆ ನಾವು ಎಚ್ಚರದಿಂದ ಇರಬೇಕು. ಆರೋಗ್ಯವೇ ಭಾಗ್ಯ. ಜೀವನ ಆನಂದಿಸಲು ಆರೋಗ್ಯವೇ ಇಲ್ಲದಿದ್ದರೇ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.ನಿಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡುವುದನ್ನು ನಿಲ್ಲಿಸಿ ಎಂದು ಮಹಿಳೆಯರಿಗೆ ಕಿವಿಮಾತು ಹೇಳಿದ್ದಾರೆ. ಮಹಿಳೆಯರಿಗೆ ಕಬ್ಬಿಣಾಂಶಗಳು ದೇಹಕ್ಕೆ ತುಂಬಾ ಅಗತ್ಯ. ಆರೋಗ್ಯ ಸಂಬಂಧ ಏನೇ ಸಲಹೆಗಳು ಇದ್ದರೆ ಕಮೆಂಟ್‌ಗಳಲ್ಲಿ ಹಂಚಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ.
ಈ ಹಿಂದೆ ನಾನು ಚಿತ್ರರಂಗದಲ್ಲಿ ಬ್ಯುಸಿಯಾಗಿರುತ್ತಿದ್ದೆ. ಸರಿಯಾದ ವೇಳೆ ಊಟಮಾಡಲು ಆಗುತ್ತಿರಲಿಲ್ಲ. ಆರೋಗ್ಯ ಹಾಳಾಗುತ್ತಿತ್ತು. ನನ್ನ ಪೋಷಕರು ಕೇಳುತ್ತಿದ್ದರು, ಕೆಲಸ ಮಾಡ್ತಿಯಾ, ಫೇಮಸ್ ಆಗಿದ್ದೀ ಆದರೆ ಆರೋಗ್ಯ ಸರಿಯಾಗಿ ನೋಡಿಕೊಳ್ಳದಿದ್ದರೆ ಜೀವನದಲ್ಲಿ ಎಂಜಾಯ್ ಮಾಡೋದೋ ಯಾವಾಗ ಎನ್ನುತ್ತಿದ್ದರು. ಇದರಿಂದಾಗಿ ನಾನು ಆರೋಗ್ಯದ ಬಗ್ಗೆ ಕೇರ್ ತೆಗೆದುಕೊಂಡೆ ಎಂದು ವಿಡಿಯೊದಲ್ಲಿ ವಿವರವಾಗಿ ಹೇಳಿಕೊಂಡಿದ್ದಾರೆ.
ಒಂದು ಕಾಲದಲ್ಲಿ ನಟನೆಯಲ್ಲಿ ಬ್ಯುಸಿಯಾಗಿದ್ದು ನಂತರ ರಾಜಕೀಯ ಪ್ರವೇಶಿಸಿ ಮಂಡ್ಯ ಕ್ಷೇತ್ರದ ಸಂಸದೆಯಾಗಿ ದೆಹಲಿಗೆ ಹೋಗಿ ನಂತರ ಹಲವಾರು ತಿಂಗಳುಗಳ ಕಾಲ ಕಾಂಗ್ರೆಸ್ ಪಕ್ಷದ “ಐಟಿ ಸೆಲ್’ನ ಮುಖ್ಯಸ್ಥೆಯಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿ, ಟೀಕಿಸಿ ರಾಹುಲ್ ಗಾಂಧಿಗೆ ಆಪ್ತೇಷ್ಟರಾಗಿ ಈಗ ರಾಜಕೀಯದಿಂದಲೇ ದೂರ ಸರಿದಿರುವ ರಮ್ಯಾ ಮೇಡಂ ಆರೋಗ್ಯ ಸಲಹೆಗಾರ್ತಿಯಾಗಿರುವುದು ಹಲವರಲ್ಲಿ ಅಚ್ಚರಿಯನ್ನು ಉಂಟುಮಾಡಿದೆ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ಬಿಗ್ ಬಾಸ್ ತೆಲುಗು ಗೆದ್ದ ಮೈಸೂರಿನ ನಿಖಿಲ್ ಮಳಿಯಕ್ಕಲ್
ವಿಶ್ವದಾಖಲೆ ತಬಲಾ ವಾದಕ ಉಸ್ತಾದ್ ಜಾಕಿರ್ ಹುಸೇನ್ ವಿಧಿವಶ
ಕಾಲ್ತುಳಿತದಲ್ಲಿ ಮಹಿಳೆ ಸಾವು: ನಟ ಅಲ್ಲು ಅರ್ಜುನ್ ಬಂಧನ