ಕೊರೋನಾ ಪಾಸಿಟಿವಿಟಿ ದರ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ, ಈಗ ಲಾಕ್ ಡೌನ್ ನಿರ್ಬಂಧಗಳನ್ನು ನಾಳೆಯಿಂದ ಸರ್ಕಾರ ಸಡಿಲಗೊಳಿಸಿ ಆದೇಶಿಸಿದೆ.
ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ ಜಿಲ್ಲಾಧಿಕಾರಿ ಬಗಾದಿ
ಅನ್ ಲಾಕ್ 3 ಕೆಟಗರಿಯಿಂದ ಮೈಸೂರು ಜಿಲ್ಲೆಯಲ್ಲಿ ಅನ್ ಲಾಕ್ ಕೆಟಗರಿ 2ಕ್ಕೆ ಸೇರ್ಪಡೆಗೊಳಿಸುವ ಮೂಲಕ, ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯವಸ್ತು ಖರೀದಿಗೆ ಸಮಯವನ್ನು ವಿಸ್ತರಣೆ ಮಾಡಿ ಆದೇಶಿಸಿದೆ ಎಂದರು.
ಮೈಸೂರು ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವಿಟಿ ದರ ಇಳಿಕೆ ಕಂಡ ಕಾರಣದಿಂದಾಗಿ, ಸರ್ಕಾರವು ಕೆಟಗರಿ 3 ರಿಂದ, ಕೆಟಗರಿ 2ಕ್ಕೆ ಸೇರ್ಪಡೆಗೊಳಿಸಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಶೇ.50ರಷ್ಟು ಕಾರ್ಮಿಕರೊಂದಿಗೆ ಕೈಗಾರಿಕೆ, ಉದ್ದಿಮೆಗಳನ್ನು ತೆರೆಯೋದಕ್ಕೆ, ಶೇ.30ರಷ್ಟು ನೌಕರರೊಂದಿಗೆ ಗಾರ್ಮೆಂಟ್ಸ್ ತೆರೆಯೋದಕ್ಕೆ ಅವಕಾಶ ನೀಡಲಾಗಿದೆ ಎಂದರು.
ಅಗತ್ಯ ಮಾರಾಟಕ್ಕೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ
- ಹಣ್ಣುಗಳು ದಿನಸಿ ಮಾಂಸ ಅಗತ್ಯ ವಸ್ತುಗಳ
- ಪಾನಿಪಾರಿ ಬಜ್ಜಿ ತಳ್ಳು ಗಾಡಿಯಲ್ಲಿ ಮಾರುವವರಿಗೂ ಅವಕಾಶ
- ಕಿರಾಣಿ ಅಂಗಡಿಗಳಿಗೆ ಅವಕಾಶ
- ಮದ್ಯದ ಅಂಗಡಿಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ
- ಎಲ್ಲಾ ವಸ್ತುಗಳು ಹೋಂ ಡೆಲಿವರಿಗೆ 24/7 ಅವಕಾಶ
- ಹೋಟೆಲ್‌ಗಳಲ್ಲಿ 24/7 ಪಾರ್ಸೆಲ್‌ಗೆ ಅವಕಾಶ
- ಕಟ್ಟಡದ ನಿರ್ಮಾಣ ಕಾಮಗಾರಿಯ ಮಾರಾಟ ಮಳಿಗೆಗೂ ಅವಕಾಶ.
- ಕಬ್ಬಿಣದ ಅಂಗಡಿ, ಸಿಮೆಂಟ್, ಹಾರ್ಡ್‌ವೇರ್ ಸೇರಿ ಎಲ್ಲಾ ಕಟ್ಟಡ ಸಾಮಾಗ್ರಿಗಳ ಅಂಗಡಿಗಳಿಗೆ ಅವಕಾಶ
- ಉದ್ಯಾನವನಗಳಲ್ಲಿ 05 ರಿಂದ 10 ರವರೆಗೂ ಅವಕಾಶ
- ಟ್ಯಾಕ್ಸಿ ಆಟೋಗಳಿಗೆ ಇಬ್ಬರು ಪ್ಯಾಸೆಂಜರ್ ಜೊತೆ ಅವಕಾಶ
- ಸರ್ಕಾರಿ ಕಚೇರಿಗಳು ಶೇಕಡ 50ರಷ್ಟು ಸಿಬ್ಬಂದಿಯೊಂದಿಗೆ ಅವಕಾಶ.
- ತರಬೇತಿಗೆ ಅವಕಾಶ
- ಕನ್ನಡಕದ ಅಂಗಡಿಗಳಿಗೂ ಅವಕಾಶ
- ಅಂತ್ಯ ಸಂಸ್ಕಾರಕ್ಕೆ 5 ಜನರಿಗೆ ಭಾಗವಹಿಸಲು ಅವಕಾಶ
- ಎಲ್ಲಾ ಕೈಗಾರಿಕೆಗಳು ಶೇಕಡ 50ರಷ್ಟು ಸಿಬ್ಬಂದಿಗೆ ಅವಕಾಶ
- ಗಾರ್ಮೆಂಟ್ಸ್‌ಗೆ ಶೇಕಡ 30ರಷ್ಟು ಕಾರ್ಮಿಕರಿಗೆ ಅವಕಾಶ
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ