March 10, 2025

Newsnap Kannada

The World at your finger tips!

sachin

ಸಚಿನ್ ತೆಂಡೂಲ್ಕರ್‌ಗೆ ಬಿಸಿಸಿಐನ ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿ

Spread the love

ಮುಂಬೈನಲ್ಲಿ ಶನಿವಾರ (ಫೆ. 1) ನಡೆದ ಬಿಸಿಸಿಐ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರಿಗೆ ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಬಾರಿ ಸಚಿನ್ ತೆಂಡೂಲ್ಕರ್ ಬಿಸಿಸಿಐನ ಅತ್ಯುನ್ನತ ಗೌರವ ಪಡೆಯುವ ನಿರೀಕ್ಷೆಯಿದ್ದ ಬಗ್ಗೆ ಈ ಹಿಂದೆ ವರದಿಯಾಗಿತ್ತು.

51 ವರ್ಷದ ಸಚಿನ್ 200 ಟೆಸ್ಟ್ ಮತ್ತು 463 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. 2013ರ ನವೆಂಬರ್‌ನಲ್ಲಿ ಅವರು 34,357 ಅಂತರಾಷ್ಟ್ರೀಯ ರನ್ ಮತ್ತು 100 ಅಂತಾರಾಷ್ಟ್ರೀಯ ಶತಕಗಳ ಸಾಧನೆಯೊಂದಿಗೆ ಕ್ರಿಕೆಟ್‌ಗೆ ವಿದಾಯ ಹೇಳಿದರು.

“ಜೀವಮಾನ ಸಾಧನೆ ಪ್ರಶಸ್ತಿ ಕ್ರಿಕೆಟ್ ದಂತಕಥೆಯ ಅಸಾಧಾರಣ 24 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಗುರುತಿಸುತ್ತದೆ. ವೈಯಕ್ತಿಕ ಮೈಲಿಗಲ್ಲುಗಳು, ರಾಷ್ಟ್ರೀಯ ವಿಜಯಗಳು, ಸವಾಲುಗಳು ಮತ್ತು ಗೆಲುವುಗಳ ಮೂಲಕ, ಅವರು ಕೇವಲ ತಮ್ಮ ಬ್ಯಾಟ್‌ನೊಂದಿಗೆ ಮಾತ್ರವಲ್ಲ, ಇಡೀ ದೇಶದ ಭರವಸೆಯನ್ನು ಹೊತ್ತಿದ್ದರು. ಇದು ಕೇವಲ ಒಬ್ಬ ಆಟಗಾರನ ಸಾಧನೆಯನ್ನು ಮಾತ್ರವಲ್ಲ, ಭಾರತೀಯ ಕ್ರಿಕೆಟ್ ಅನ್ನು ಜಾಗತಿಕ ಶಕ್ತಿಯಾಗಿ ರೂಪಿಸಿದ ಪ್ರತೀಕವಾಗಿದೆ,” ಎಂದು ಬಿಸಿಸಿಐ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚೆಗೆ ಐಸಿಸಿ ಪುರುಷರ ವರ್ಷದ ಕ್ರಿಕೆಟಿಗ (2024) ಎಂದು ಹೆಸರಿಸಲ್ಪಟ್ಟ ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ, ಮೂರನೇ ಬಾರಿಗೆ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ (ಪುರುಷ) ಪಾಲಿ ಉಮ್ರಿಗರ್ ಪ್ರಶಸ್ತಿ ಗೆದ್ದಿದ್ದಾರೆ.ಇದನ್ನು ಓದಿ –ತಾಯಿ ಸರಸ್ವತಿ ಆವಿರ್ಭವಿಸಿದ ದಿನ : ವಸಂತ ಪಂಚಮಿ

ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ನಾಲ್ಕನೇ ಬಾರಿಗೆ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ (ಮಹಿಳಾ) ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!