ಬೆಂಗಳೂರು: ಕೆ.ಆರ್ ಸರ್ಕಲ್ ಬಳಿ BBMP ಕಸದ ಲಾರಿಗೆ ಬೈಕ್ ಸಿಲುಕಿ, ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ.
ಪ್ರಶಾಂತ್ ಹಾಗೂ ಬಯ್ಯಣ್ಣ ಗರಿ ಶಿಲ್ಪ ಮೃತ ದುರ್ದೈವಿಗಳು.
ಸಿಐಡಿ (CID) ಸಿಗ್ನಲ್ ಕಡೆಯಿಂದ ಕೆ.ಆರ್ ಸರ್ಕಲ್ (KR Circle) ಕಡೆಗೆ ವೇಗವಾಗಿ ತಿರುವು ಪಡೆಯುತ್ತಿದ್ದ ಲಾರಿಗೆ, ಮೆಜೆಸ್ಟಿಕ್ ಕಡೆಯಿಂದ ಬಂದ ಬೈಕ್ ಸಿಲುಕಿದ್ದು ,10 ಮೀಟರ್ನಷ್ಟು ದೂರ ದೇಹಗಳನ್ನ ಲಾರಿ ಎಳೆದೊಯ್ದಿದಿದೆ.
ಗಾಯಾಳುಗಳನ್ನ ಆಸ್ಪತ್ರೆಗೆ (Hospital) ದಾಖಲಿಸುವಾಗ ಮಾರ್ಗ ಮಧ್ಯೆಯೇ ಬೈಕ್ ಸವಾರರು ಮೃತಪಟ್ಟಿದ್ದಾರೆ.
ಮೃತ ಪ್ರಶಾಂತ್ ಹಾಗೂ ಶಿಲ್ಪ ಇಬ್ಬರು ಒಂದೇ ಕಂಪನೆಯಲ್ಲಿ ಕೆಲಸ ಮಾಡುತ್ತಿದ್ದು , ಪ್ರಶಾಂತ್ ಮೂಲತಃ ಬೆಂಗಳೂರಿನ ಯುವಕ .
ಶಿಲ್ಪ ಆಂಧ್ರ ಪ್ರದೇಶ ಹಿಂದೂಪರ ಮೂಲದವರಾಗಿದ್ದು, ಐಟಿಪಿಎಲ್ ಟಿಸಿಎಸ್ ನಲ್ಲಿ ಕೆಲಸ ಮಾಡುತ್ತಾ ನಾಗವಾರದ ಪಿಜಿಯೊಂದರಲ್ಲಿ ವಾಸಿಸುತ್ತಿದ್ದರು.
ಊಟಕ್ಕೆ ಎಂದು ಹೊರಗೆ ಬಂದಾಗ ದುರ್ಘಟನೆ ನಡೆದಿದ್ದು, ಘಟನೆ ಬಳಿಕ ಕಸದ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಭಾನುವಾರ ಬೆಳಗ್ಗೆ ಮದುವೆ ಮಾತುಕತೆ ಪ್ರಸ್ತಾಪ ಆಗಿತ್ತು ಎನ್ನಲಾಗಿದ್ದು, ಸಂಜೆ ವೇಳೆ ಯುವತಿ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಬೌರಿಂಗ್ ಆಸ್ಪತ್ರೆ ಶವಾಗಾರದ ಬಳಿಕ ಶಿಲ್ಪ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
ಉಪ್ಪಾರಪೇಟೆ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )