December 24, 2024

Newsnap Kannada

The World at your finger tips!

psi harish

ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ : ಬ್ಯಾಟರಾಯನಪುರ ಪಿಎಸ್ಐ ಅಮಾನತ್ತು

Spread the love

ಕೇಸ್​ ದಾಖಲಿಸದೆ ಠಾಣೆಗೆ ಕರೆತಂದು ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಪ್ರಕರಣ ಸಂಬಂಧ ಬ್ಯಾಟರಾಯನಪುರ ಪಿಎಸ್ ಐ ಹರೀಶ್​ರನ್ನು ಅಮಾನತು ಮಾಡಲಾಗಿದೆ.

ಬೆಂಗಳೂರಿನ ಬ್ಯಾಟರಾಯನಪುರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹರೀಶ್​ರನ್ನು ಕರ್ತವ್ಯ ಲೋಪ ಹಿನ್ನೆಲೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಸಸ್ಪೆಂಡ್ ಮಾಡಿದ್ದಾರೆ.

ಮೈಸೂರು ಹಳೆಗುಡ್ಡದಹಳ್ಳಿ ನಿವಾಸಿ ತೌಸಿಫ್ ಪಾಷಗೆ ಪಿಎಸ್ ಐ ಹರೀಶ್​ ಥಳಿಸಿದ ಆರೋಪದ ಹಿನ್ನಲೆ ಎಸಿಪಿ ನೇತೃತ್ವದಲ್ಲಿ ಡಿಸಿಪಿ ತನಿಖೆಗೆ ಆದೇಶಿಸಿದ್ದರು

ಇನ್ನು ಈ ಪ್ರಕರಣದ ಮಧ್ಯಂತರ ವರದಿ ಬಳಿಕ ಪಿಎಸ್ ಐ ಹರೀಶ್​ರನ್ನು ಡಿಸಿಪಿ ಸಸ್ಪೆಂಡ್ ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!