February 24, 2026

Newsnap Kannada

The World at your finger tips!

BASAVARAJ BOMMAYI

ಲಾಠಿ ಪ್ರಯೋಗ ಮಾಡದೆ ಬಿಗಿ ಕ್ರಮ ಕೈಗೊಳ್ಳಲು ಸೂಚನೆ – ಬಸವರಾಜ್ ಬೊಮ್ಮಾಯಿ

Spread the love

ಲಾಕ್ ಡೌನ್ ಸಂದರ್ಭದಲ್ಲಿ ಜನರ ಮೇಲೆ ಲಾಠಿ ಪ್ರಯೋಗ ಮಾಡದೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿರುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು‌.

ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಅನುಕೂಲಕ್ಕಾಗಿಯೇ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರ ಅರ್ಥ ಹಿಂಸೆ ಕೊಡಬೇಕು ಎಂಬುದು ಅಲ್ಲ. ಹೀಗಾಗಿ ಲಾಠಿ ಪ್ರಯೋಗ ಬೇಡ ಅದರ ಬದಲಿಗೆ ಕಾನೂನನ್ನು ಕಟ್ಟುನಿಟ್ಟಾಗಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.

ನಾನು ಜನರಿಗೆ ಮನವಿ ಮಾಡಿಕೊಳ್ಳುವುದು ಇಷ್ಟೇ ಪೊಲೀಸರಿಗೆ ಅನಿವಾರ್ಯ ಪರಿಸ್ಥಿತಿಯನ್ನು ತರಬೇಡಿ. ಜನ ಸಹಕಾರ ನೀಡಿದರೆ. ನಾವು ಸಹಕಾರ ನೀಡುತ್ತೇವೆ ಎಂದು ಅವರು ತಿಳಿಸಿದರು. ..

error: Content is protected !!