November 15, 2024

Newsnap Kannada

The World at your finger tips!

basava kalyan

ಬಸವ ಕಲ್ಯಾಣ: ಹೊಸ ಪರಿಕಲ್ಪನೆಯ ಅನುಭವ ಮಂಟಪ ಕಟ್ಟಡ ನಿರ್ಮಾಣಕ್ಕೆ ಸಿಎಂ ಶುಂಕು ಸ್ಥಾಪನೆ

Spread the love

ಬೀದರ್ ನಲ್ಲಿ ಶತಮಾನಗಳಷ್ಟು ಹಿಂದೆಯೇ ಸಂಸತ್ತು ಎಂಬುದನ್ನು ಅಳವಡಿಸಿಕೊಂಡಿದ್ದ ಬಸವ ಕಲ್ಯಾಣದಲ್ಲಿ ಬಸವಣ್ಣನವರು 12ನೇ ಶತಮಾನದಲ್ಲಿಯೇ ಸ್ಥಾಪಿಸಿದ್ದ ಹಾಗೂ ಜಗತ್ತಿನ ಮೊದಲ ಪಾರ್ಲಿಮೆಂಟ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅನುಭವ ಮಂಟಪವನ್ನು ಹೊಸ ಪರಿಕಲ್ಪನೆಯಲ್ಲಿ ಭವ್ಯ ಕಟ್ಟಡದ ರೂಪದಲ್ಲಿ ನಿರ್ಮಿಸಲು ಸಿದ್ಧತೆಗಳು ನಡೆದಿವೆ.

ರಾಜ್ಯದ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಬುಧವಾರ ನೂತನ ಅನುಭವ ಮಂಟಪದ ನಿರ್ಮಾಣಕ್ಕಾಗಿ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಭೂಮಿ ಪೂಜೆ ನೇರವೇರಿಸಿದರು.

basava kalyan1

ಅನುಭವ ಮಂಟಪದ ವಿಶೇಷತೆಗಳು:

  • 500 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣವಾಗಲಿದೆ.‌
  • ಮಿನಿ ಪಾರ್ಲಿಮೆಂಟ್ ನಿರ್ಮಾಣಕ್ಕಾಗಿ ಒಟ್ಟು 25 ಎಕರೆಗಳಷ್ಟು ಜಾಗ ಮೀಸಲಿಡಲಾಗಿದೆ.
  • ಇದರಲ್ಲಿ 7.5 ಎಕರೆ ವಿಸ್ತೀರ್ಣದಲ್ಲಿ ಅನುಭವ ಮಂಟಪ ನಿರ್ಮಾಣವಾಗಲಿದೆ.
  • ಈ ಅನುಭವ ಮಂಟಪ 182 ಅಡಿ ಎತ್ತರ, 2884 ಅಡಿ‌ ಸುತ್ತಳತೆಯನ್ನು ಹೊಂದಿರಲಿದೆ.
  • 6 ಅಂತಸ್ತಿನ ಗೋಲಾಕಾರದ ಮಾದರಿಯ ಭವ್ಯವಾದ ಅನುಭವ ಮಂಟಪ ನಿರ್ಮಾಣವಾಗಲಿದೆ. ಈ ಅನುಭವ ಮಂಟಪದಲ್ಲಿ 770 ಕಂಬಗಳನ್ನು ನಿರ್ಮಾಣ ಮಾಡಲಾಗುತ್ತದೆ.
  • 12ನೇ ಶತಮಾನದಲ್ಲಿ ಬಾಳಿ ಬದುಕಿದ್ದ ಶರಣ, ಶರಣೆಯರ ಹೆಸರನ್ನು ಕಂಬದಲ್ಲಿ ಕೆತ್ತನೆ ಮಾಡಲಾಗುವುದು.
  • ಒಂದನೆಯ ಅಂತಸ್ತು ಭಕ್ತ ಸ್ಥಳ, ಎರಡನೆಯ ಅಂತಸ್ತು ಮಹೇಶ ಸ್ಥಳ, ಮೂರನೇ ಅಂತಸ್ತು ಪ್ರಸಾದ ಸ್ಥಳ, ನಾಲ್ಕನೆಯ ಅಂತಸ್ತು ಪ್ರಾಣಲಿಂಗ ಸ್ಥಳ, ಐದನೇ ಅಂತಸ್ತು ಶರಣ ಸ್ಥಳ, ಆರನೇ ಅಂತಸ್ತು ಐಕ್ಯ ಸ್ಥಳಗಳಾಗಿ ವಿಂಗಡಣೆ ಮಾಡಲಾಗಿದೆ.
  • 770 ಆಸನಗಳುಳ್ಳ ಸುಸಜ್ಜಿತ ಸಭಾ ಭವನ ಇರಲಿದೆ. ಆರು ಅಂತಸ್ತು ಇರುವ ಭವ್ಯವಾದ ಮಿನಿ ಪಾರ್ಲಿಮೆಂಟ್ ನೀಲ ನಕ್ಷೆ ರೆಡಿಯಾಗಿದ್ದು, ಅನುಭವ ಮಂಟಪದ ಕಟ್ಟಡದ ತುದಿಯಲ್ಲಿ ನೂರು ಅಡಿ ವ್ಯಾಸದ ಬೃಹತ್ ಲಿಂಗಾಕಾರದ ಗೋಪುರ ನಿರ್ಮಾಣ ಮಾಡಲಾಗುತ್ತದೆ.
  • ಕಟ್ಟಡದ ನೆಲ ಮಾಳಿಗೆಯಲ್ಲಿ ಸಾವಿರ ಜನರು ಪ್ರಸಾದ ಸ್ವೀಕರಿಸುವ ದಾಸೋಹ ಭವನ ಇರಲಿದೆ.
  • ಶಂಕುಸ್ಥಾಪನೆಯಾದ ಎರಡರಿಂದ ಮೂರು ವರ್ಷದಲ್ಲಿ ಅನುಭವ ಮಂಟಪದ ‌ನಿರ್ಮಾಣ ಗುರಿ ಹೊಂದಲಾಗಿದೆ. 2017 ರಲ್ಲಿ ಗೋ. ರು. ಚನ್ನಬಸಪ್ಪ ಅವರ ನೇತೃತ್ವದ ತಜ್ಞರ ತಂಡ ನೀಡಿರುವ ವರದಿ ಅನ್ವಯ ಅನುಭವ ಮಂಟಪ ನಿರ್ಮಾಣವಾಗಲಿದೆ.
  • ಕಲ್ಯಾಣಿ ಚಾಲುಕ್ಯರ ಶೈಲಿಯಲ್ಲಿ ಅನುಭವ ಮಂಟಪ ಇರಲಿದೆ. ಸಿಮೆಂಟ್ ಮತ್ತು ಕಲ್ಲುಗಳನ್ನು ಬಳಸಿ ನೂತನ ಅನುಭವ ಮಂಟಪ ನಿರ್ಮಾಣ ಮಾಡಲಾಗುತ್ತದೆ.
Copyright © All rights reserved Newsnap | Newsever by AF themes.
error: Content is protected !!