ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಲಂಚ ಸ್ವೀಕಾರದ ವಿರುದ್ಧವಾಗಿ ಮತ್ತು ಹಲವು ಬೇಡಿಕೆಗಳನ್ನು ಈಡೇರಿಸುವ ಆಗ್ರಹದಿಂದ, ಕರ್ನಾಟಕ ವೈನ್ ಮಾರ್ಚೆಂಟ್ಸ್ ಅಸೋಸಿಯೇಷನ್ ನ.20ರಂದು ರಾಜ್ಯಾದ್ಯಂತ ಬಾರ್ ಬಂದ್ ಗೆ ಕರೆ ನೀಡಿದೆ.
ಮಾಜಿ ಅಬಕಾರಿ ಸಚಿವರು ಗೋಪಾಲಯ್ಯ ಮತ್ತು ನಾಗೇಶ್ ಅವರ ಕಾಲದಲ್ಲೂ ಲಂಚ ಇತ್ತು ಎಂದು ಮದ್ಯ ಮಾರಾಟಗಾರರ ಒಕ್ಕೂಟ ಆರೋಪಿಸಿವೆ. ಆದರೆ ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಮದ್ಯ ಮಾರಾಟಗಾರರು ಅಬಕಾರಿ ಸಚಿವರ ಬದಲಾವಣೆಯ ಜೊತೆಗೆ, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಗೆ ಒತ್ತಾಯಿಸಿದ್ದಾರೆ.ಇದನ್ನು ಓದಿ –ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ನವೆಂಬರ್ 20ರಂದು ಬಾರ್ ಬಂದ್ ಗೆ 10ಕ್ಕೂ ಹೆಚ್ಚು ಮದ್ಯದಂಗಡಿ ವ್ಯಾಪಾರಸ್ಥರು ಬೆಂಬಲ ನೀಡಿದ್ದು, ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ಕಾನೂನು ತಿದ್ದುಪಡಿ ಆಗ್ರಹಿಸಲಿದ್ದಾರೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ