ನಿನ್ನ ಮೈಮೇಲೆ ಬಿಳಿ ತುಂಡುಡುಗೆ
ನಕ್ಕರೂ ಅದೇ ಬಿಳಿ…..
ಕೋಟಿಗಳ ಕೋಟೆ, ನಿನ್ನ ಹೆಸರಿನದೇ ಕಾರುಬಾರು
ಸರಳತೆಯ ಸ್ಪೆಲ್ಲಿಂಗ್ ಹುಡುಕುವ
ನಿನ್ನ ಕನ್ನಡಕದೊಳಗಿನ ಕಣ್ಣು ಮಂಜು ಮಂಜು
ಏಕೋ ನೀ ಮೊದಲಿನಂತಿಲ್ಲ
ನಿನ್ನಲ್ಲಿ ರಕ್ತ ಮಾಂಸವಿತ್ತೋ ಕಾಣೆ
ಪುಟುಪುಟು ಉತ್ಸಾಹದ ನಡಿಗೆ……
ಅಲ್ಲೆಲ್ಲೋ ತಾನಿಬಾನಿಗಳ ಅಟ್ಟಹಾಸ
ನೀ ನಕ್ಕಂತೆ ಮಾಡಿದರೂ ನಗೆ ಕಾಣದು
ಕಣ್ಣಂಚ ತೇವ ತೋಯಿಸುವುದು ಪಟವ
ಏಕೋ ನೀ ಮೊದಲಿನಂತಿಲ್ಲ
ನಿನ್ನ ಅಹಿಂಸೆಯ ಮಂತ್ರಕೆ ಮಣಿಯದವರಿಲ್ಲ
ಭುವಿಗೆ ನೆತ್ತರ ರುಚಿ ಬೇಕಿಲ್ಲ….
ಟಿ.ವಿ. ನ್ಯೂಸ್ ನೋಡಿದಾಗಲೆಲ್ಲ ನಿಟ್ಟುಸಿರು
ಬಣ್ಣದ ಫೋಟೋ ಕಟ್ಟಿನ ಹಿಂದೆ
ಅಡಗಲು ನೋಡುವೆ ಫ್ರೇಮು ಗಟ್ಟಿಯಾಗಿದೆ
ಏಕೋ ನೀ ಮೊದಲಿನಂತಿಲ್ಲ
–ಡಾ.ಶುಭಶ್ರೀಪ್ರಸಾದ್
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ
ರಾಮನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ (ಜಿಲ್ಲೆ ೨೯)