January 16, 2025

Newsnap Kannada

The World at your finger tips!

37b963f7 af14 441a 8746 375cd035d0ef

ಕೆಲಸದ ‌ಒತ್ತಡಕ್ಕೆ ನೊಂದ ಮ್ಯಾನೇಜರ್ ಬ್ಯಾಂಕ್‍ನಲ್ಲಿಯೇ ಆತ್ಮಹತ್ಯೆ

Spread the love

ಕೆಲಸ ಒತ್ತಡದಿಂದ ಮನನೊಂದ ಮಹಿಳಾ ಬ್ಯಾಂಕ್‍ ಮ್ಯಾನೇಜರ್ ಬ್ಯಾಂಕ್ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ.

ಕೆ. ಸ್ವಪ್ನಾ (38) ಮೃತ ಮ್ಯಾನೇಜರ್.
ಸ್ವಪ್ನಾ ಕಣ್ಣೂರು ಜಿಲ್ಲೆಯ ಕುಥುಪರಂಬರದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯೊಂದರ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲಸ ಒತ್ತಡದಿಂದ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನನಗೆ ಕೆಲಸದ ಒತ್ತಡ ತುಂಬಾ ಹೆಚ್ಚಾಗಿದೆ. ಆದ್ದರಿಂದ ಹೀಗೆ ಮಾಡಿಕೊಂಡಿದ್ದೇನೆ ಎಂದು ಸ್ವಪ್ನ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.‌

ಕೆನರಾ ಬ್ಯಾಂಕ್‍ನ ಥೊಕ್ಕಿಲಂಗಡಿ ಶಾಖೆಯಲ್ಲಿ ಸ್ವಪ್ನಾ ನೇಣು ಬಿಗಿದುಕೊಂಡಿದ್ದರು. ಈ ವಿಚಾರ ತಿಳಿದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿಪಿದ್ದಾರೆ.

ಸ್ವಪ್ನಾ ಅವರಿಗೆ ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಈ ಶಾಖೆಗೆ ವರ್ಗಾವಣೆಯಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಗೊತ್ತಾಗಿದೆ.

Copyright © All rights reserved Newsnap | Newsever by AF themes.
error: Content is protected !!