ಮಾಚ್ 15 ರಿಂದ ದೇಶಾದ್ಯಂತ 2 ದಿನ ಕಾಲ ಬ್ಯಾಂಕ್ ನೌಕರರ ಮುಷ್ಕರ

Team Newsnap
1 Min Read

9 ಒಕ್ಕೂಟಗಳ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ ಬಿಯು) ಎರಡು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಖಾಸಗೀಕರಣ ಗೊಳಿಸುವ ಪ್ರಸ್ತಾಪವನ್ನು ವಿರೋಧಿಸಿ ಮಾರ್ಚ್ ನಲ್ಲಿ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ.

ಮಾರ್ಚ್ 15ರಿಂದ ಎರಡು ದಿನಗಳ ಮುಷ್ಕರ ಆರಂಭಿಸಲಾಗುತ್ತದೆ ಎಂದು ಯುಎಫ್ ಬಿಯು ತಿಳಿಸಿದೆ.

ಮಂಗಳವಾರ ನಡೆದ ಯುಎಫ್ ಬಿಯು ಸಭೆಯಲ್ಲಿ ಬ್ಯಾಂಕ್ ಗಳ ಖಾಸಗೀಕರಣದ ಸರ್ಕಾರದ ನಿರ್ಧಾರವನ್ನು ವಿರೋಧಿಸಲು ನಿರ್ಧರಿಸಲಾಗಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ತಿಳಿಸಿದ್ದಾರೆ.

ಕಳೆದ ವಾರ ಕೇಂದ್ರ ಬಜೆಟ್ ಮಂಡನೆ ಮಾಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಾರ್ವಜನಿಕ ವಲಯದ ಎರಡು ಬ್ಯಾಂಕ್ ಗಳನ್ನು (ಪಿಎಸ್ ಬಿ) ಖಾಸಗೀಕರಣ ಗೊಳಿಸುವುದಾಗಿ ಘೋಷಿಸಿದ್ದರು. ಸರ್ಕಾರ ಈಗಾಗಲೇ ಐಡಿಬಿಐ ಬ್ಯಾಂಕ್ ಅನ್ನು ಖಾಸಗೀಕರಣಗೊಳಿಸಿದೆ, ಕಳೆದ ನಾಲ್ಕು ವರ್ಷಗಳಲ್ಲಿ 14 ಸಾರ್ವಜನಿಕ ವಲಯದ ಬ್ಯಾಂಕ್ ಗಳನ್ನು ವಿಲೀನ ಮಾಡಿದೆ.

ಬ್ಯಾಂಕ್ ಗಳನ್ನು ಖಾಸಗಿಕರಣ ಮಾಡುವುದರಿಂದ ಸಾರ್ವಜನಿಕ ವಲಯದಲ್ಲಿ ವಿಶ್ವಾಸಾರ್ಹತೆ ತಗ್ಗಲಿದೆ ಎಂಬ ಆತಂಕ ನೌಕರರದ್ದಾಗಿದೆ

Share This Article
Leave a comment