ಬೆಂಗಳೂರು ನಗರ ಜಿಲ್ಲೆ: 1 ಲಕ್ಷ ವಸತಿ ನಿರ್ಮಾಣಕ್ಕೆ 500 ಎಕರೆ ಭೂಮಿ ನೀಡಿ – ಸಿಎಂಗೆ ವಸತಿ ಸಚಿವರ ಮನವಿ

Team Newsnap
1 Min Read
Tumkur Lok Sabha seat ticket for Somanna? MP Basavaraj ಸೋಮಣ್ಣಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ? ಸಂಸದ ಬಸವರಾಜ್

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 1 ಲಕ್ಷ ಬಹುಮಹಡಿ ವಸತಿ ನಿರ್ಮಾಣ ಮಾಡುವ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡಲು 500 ಎಕರೆ ವಸತಿ ಯೋಗ್ಯ ಭೂಮಿ ಮಂಜೂರು ಮಾಡುವಂತೆ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಸತಿ ಸಚಿವ ಶ್ರೀ ವಿ.ಸೋಮಣ್ಣ ಪತ್ರ ಬರೆದಿದ್ದಾರೆ.

ಸರ್ಕಾರ ಈಗಾಗಲೆ 1,014 ಎಕರೆ ಭೂಮಿಯನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಿದೆ.ಆದರೆ, ಈ ಭೂಮಿಯಲ್ಲಿ 311 ಎಕರೆ ಪ್ರದೇಶ ಮಾತ್ರ ವಸತಿ ಬಳಕೆಗೆ ಯೋಗ್ಯವಾಗಿದೆ, ಉಳಿದ ಭೂಮಿ ವಸತಿ ಬಳಕೆಗೆ ಯೋಗ್ಯವಾಗಿಲ್ಲ ಎಂದು ವಿವರಿಸಿ
ವಸತಿ ಯೋಗ್ಯ ಹಾಗೂ ವಿವಾದರಹಿತ 500 ಎಕರೆ ಭೂಮಿ ಅವಶ್ಯವಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕಂದಾಯ ಸಚಿವ ಆರ್.ಅಶೋಕ ಅವರಿಗೂ ಪ್ರತ್ಯೇಕ ಪತ್ರ ಬರೆದಿರುವ ವಸತಿ ಸಚಿವ ಶ್ರೀ ವಿ.ಸೋಮಣ್ಣ ಅವರು, 1 ಲಕ್ಷ ಬಹುಮಹಡಿ ವಸತಿ ಯೋಜನೆಗೆ ಪೂರಕವಾಗಿ ಹರಾಜು ಹಾಕಲು ಉದ್ದೇಶಿಸಿರುವ 103.12 ಎಕರೆ ಸರ್ಕಾರಿ ಭೂಮಿ ಸೇರಿದಂತೆ 500 ಎಕರೆ ಭೂಮಿ ಮಂಜೂರು ಮಾಡಲು ಕೋರಿದ್ದಾರೆ.

ಈ ಸಂಬಂಧದಲ್ಲಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಆಯುಕ್ತರಿಗೆ ಪತ್ರ ಬರೆದಿರುವ ವಸತಿ ಸಚಿವರು, ಸರ್ಕಾರ 1 ಲಕ್ಷ ಬಹುಮಹಡಿ ವಸತಿ ಯೋಜನೆಗಾಗಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಮಂಜೂರು ಮಾಡಿರುವ ಭೂಮಿಯ ಪೈಕಿ, ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 30 ಎಕರೆ ಅನುಪಯುಕ್ತ ಭೂಮಿಯಿದೆ. ಇದು ಕ್ವಾರಿಗಳು, ಹಳ್ಳಕೊಳ್ಳಗಳಿಂದ ಕೂಡಿದೆ, ಈ ಭೂಮಿಯನ್ನು ಪಾಲಿಕೆ ವತಿಯಿಂದಲೇ ಸಮತಟ್ಟು ಮಾಡಿಕೊಡಲು ಹಾಗೂ ಈ ಸ್ಥಳದಲ್ಲಿ ವಸತಿ ನಿರ್ಮಾಣ ಮಾಡಲು ಸೂಕ್ತ ಅನುದಾನವನ್ನು ಪಾಲಿಕೆ ವತಿಯಿಂದಲೇ ಒದಗಿಸಬೇಕೆಂದು ತಿಳಿಸಿದ್ದಾರೆ.

Share This Article
Leave a comment