ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಒಂದೇ ವಾರದಲ್ಲಿ ದಾಖಲೆ ಮೊತ್ತದ ದಂಡ ಸಂಗ್ರಹಣೆ ಮಾಡಿ ದಾಖಲೆ ಬರೆದಿದ್ದಾರೆ.
ಅ.4 ರಿಂದ ಅ.10ರವರೆಗೆ ಬರೋಬ್ಬರಿ ನಾಲ್ಕು ಕೋಟಿ ಹಣ ಸಂಗ್ರಹ ಮಾಡಿದ್ದಾರೆ. ಕೊರೋನಾ ಅನ್ಲಾಕ್ ಆದ ಬಳಿಕ ಸವಾರರು ಟ್ರಾಫಿಕ್ ನಿಯಮ ಮರೆತು ವಾಹನ ಸಂಚಾರ ಮಾಡುತ್ತಿದ್ದ ಪರಿಣಾಮ ಸುಮಾರು ಒಂದು ಕಾಲು ಕೋಟಿಯಷ್ಟು ಹಣ ಹೆಲ್ಮೆಟ್ ರಹಿತ ಬೈಕ್ ಚಾಲನೆಯಿಂದ ಸಂಗ್ರಹಿಸಲಾಗಿದೆ.
ಕೋವಿಡ್ ಸಂಕಷ್ಟದಲ್ಲಿ ದಂಡ ವಸೂಲಿಗೆ ಕೂಡ ಪೊಲೀಸರು ಕೆಲಕಾಲ ಹಿಂದೇಟು ಹಾಕಿದರು. ಹೆಲ್ಮೆಟ್ ಇಲ್ಲದೇ,ಸೂಕ್ತ ದಾಖಲೆ ಇಲ್ಲದೆ, ಸಿಗ್ನಲ್ ಜಂಪ್ ಮಾಡುತ್ತಾ ಹಲವರು ಪ್ರಯಾಣ ಬೆಳೆಸಿದ್ದರು.
ಕಳೆದೊಂದು ವಾರದಿಂದ ನಗರದಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಳವಾಗಿದೆ.
ನಗರದಾದ್ಯಂತ ಬಿಗಿಯಾಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 97,213 ಕೇಸ್ ದಾಖಲಾಗಿವೆ. 4.02 ಕೋಟಿ ದಂಡ ವಸೂಲಿಯಾಗಿದೆ. ಇದರಲ್ಲಿ ಸಿಗ್ನಲ್ ಜಂಪ್ 10, 538 ಪ್ರಕರಣ 38.43 ಲಕ್ಷ ದಂಡ , ಹೆಲ್ಮೆಟ್ ರಹಿತ ಬೈಕ್ ಚಾಲನೆ 30712 ಕೇಸ್ 1.14 ಕೋಟಿ ದಂಡ, ಹೆಲ್ಮೆಟ್ ಇಲ್ಲದ ಹಿಂಬದಿ ಸವಾರ 19,403 ಕೇಸ್ 72 ಲಕ್ಷ ದಂಡ, ನೋ ಎಂಟ್ರಿಯಲ್ಲಿ ವಾಹನ ಚಾಲನೆ 4,154 ಕೇಸ್ 15.77 ಲಕ್ಷ ದಂಡ ವಸೂಲಿಯಾಗಿದೆ. ಅಲ್ಲದೇ ಸೀಟ್ ಬೆಲ್ಟ್ ರಹಿತ ಚಾಲನೆ 5,364 ಕೇಸ್ಗಳಲ್ಲಿ 25 ಲಕ್ಷ ದಂಡ, ರಾಂಗ್ ಪಾರ್ಕಿಂಗ್ 3887 ಪ್ರಕರಣದಲ್ಲಿ 11 ಲಕ್ಷ ದಂಡ ವಸೂಲಿಯಾಗಿದೆ.
More Stories
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ