January 13, 2025

Newsnap Kannada

The World at your finger tips!

magu kalli

ಮಗು ಕದ್ದ ಮನೋ ವೈದ್ಯೆಯನ್ನು ಬಂಧಿಸಿದ ಬೆಂಗಳೂರು ಪೊಲೀಸರು

Spread the love

ಒಂದು ವರ್ಷದ ಹಿಂದೆ ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಮಗು ಕಳ್ಳತನ ಮಾಡಿದ್ದ ಮನೋ ವೈದ್ಯೆಯೊಬ್ಬ ರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.‌

ವೈದ್ಯೆ ರಶ್ಮಿ ಆಸ್ಪತ್ರೆಗೆ ಆಟೋವೊಂದರಲ್ಲಿ ಬಂದು ಮಗುವನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಳು. ಇದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯ ರೇಖಾಚಿತ್ರವನ್ನು ಬಳಸಿ ಪೊಲೀಸರು ಸತತ ಒಂದು ವರ್ಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿ ಮಗುವನ್ನ ಕೊಪ್ಪಳ ಮೂಲದ ದಂಪತಿಗೆ ನೀಡಿದ್ದಳು. ಸದ್ಯ ಮಗುವನ್ನ ರಕ್ಷಿಸಲಾಗಿದೆ.

15 ಲಕ್ಷ ಪಡೆದು ದಂಪತಿಗೂ ವಂಚಿಸಿದ ಈ ಲೇಡಿ ಡಾಕ್ಟರ್ 2014 ರ ಸಮಯದಲ್ಲಿ ಹುಬ್ಬಳ್ಳಿಯ ಎಸ್​ಡಿಎಂ ಆಸ್ಪತ್ರೆಯಲ್ಲಿ ರಶ್ಮಿ ವೈದ್ಯೆಯಾಗಿ ಕೆಲಸ ಮಾಡ್ಡಿದ್ದಳು.

ಈ ವೇಳೆ ಕೊಪ್ಪಳ ಮೂಲದ ದಂಪತಿಯ ಪರಿಚಯವಾಗಿತ್ತು. ಈ ದಂಪತಿ ಬಳಿ ಓರ್ವ ವಿಶೇಷ ಚೇತನ ಮಗುವಿತ್ತು. ಹೀಗಾಗಿ ಆ ಮಗುವನ್ನ ರಶ್ಮಿ ಬಳಿ ಚಿಕಿತ್ಸೆಗಾಗಿ ಕರೆತರುತ್ತಿದ್ದರಂತೆ. ಈ ವೇಳೆ ದಂಪತಿಯನ್ನು ಪರಿಚಯ ಮಾಡಿಕೊಂಡಿದ್ದ ರಶ್ಮಿ ನಿಮಗೆ ನಿಮ್ಮ ಮಗುವೇ ಜನಿಸುತ್ತೆ ಎಂದು ದಂಪತಿಯಿಂದ ಅಂಡಾಣು ಮತ್ತು ವೀರ್ಯಾಣು ಪಡೆದು ಶೇಖರಿಸಿಟ್ಟಿದ್ದಳು.

ಈ ಅಂಡಾಣು ಮತ್ತು ವೀರ್ಯಾಣು ಬೇರೊಬ್ಬ ಮಹಿಳೆಯ ಗರ್ಭ ಸೇರಲಿದೆ. ಆ ಮೂಲಕ ನಿಮ್ಮ ಮಗು ಬೇರೊಂದು ಮಹಿಳೆಯ ಗರ್ಭದಲ್ಲಿ ಬೆಳೆಯಲಿದೆ ಎಂದು ಹೇಳಿದ್ದಳು.

2019 ರಲ್ಲಿ ವೈದ್ಯ ದಂಪತಿಯಿಂದ ಮುಂಗಡ ಹಣ ಪಡೆದಿದ್ದಳು. ಆದರೆ ತಾನು ಶೇಖರಿಸಿದ ಅಂಡಾಣು, ವೀರ್ಯಾಣುವನ್ನು ರಶ್ಮಿ ಎಲ್ಲಿಯೂ ಬಳಸಲೇ ಇಲ್ಲ. ಕೊನೆಗೆ 2020 ರ ಮೇ 29 ರಂದು ಚಾಮರಾಜಪೇಟೆ ಹೆರಿಗೆ ಆಸ್ಪತ್ರೆಯಿಂದ ಮಗುವನ್ನು ಕದ್ದು ದಂಪತಿಯಿಂದ ಹಣ ಪಡೆದು ಮಗು ನೀಡಿದ್ದಳು.

ಆ ದಂಪತಿ ಕಳೆದೊಂದು ವರ್ಷ ದಿಂದ ತಮ್ಮದೇ ಮಗು ಎಂದು ಬೇರೊಬ್ಬ ತಾಯಿಯ ಮಗುವನ್ನು ಸಾಕುತ್ತಿದ್ದರು ಎನ್ನಲಾಗಿದೆ.

Copyright © All rights reserved Newsnap | Newsever by AF themes.
error: Content is protected !!