- ಹೊಸ ಸಂಖ್ಯೆ ನಿರ್ಣಯದಿಂದ ಪ್ರಯಾಣಿಕರಿಗೆ ಮಾಹಿತಿ
ಬೆಂಗಳೂರು: ಬೆಂಗಳೂರು-ಮೈಸೂರು ರೈಲು ಮಾರ್ಗದ ಕೆಲವು ರೈಲುಗಳು ನಿರ್ವಹಣಾ ಕಾಮಗಾರಿಗಳ ಕಾರಣದಿಂದ ಕೆಲವು ದಿನಗಳ ಕಾಲ ತಡವಾಗಿ ಸಂಚರಿಸಲಿವೆ ಎಂದು ನೈಋತ್ಯ ರೈಲ್ವೆ ಇಲಾಖೆಯು ಪ್ರಕಟಿಸಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ (ಎಸ್‌ಎಂವಿಟಿ) ಮತ್ತು ಕೆಂಗೇರಿ ನಡುವಿನ ಕಾಮಗಾರಿಗಳ ಹಿನ್ನೆಲೆಯಲ್ಲಿ ಕೆಲವು ರೈಲುಗಳು 90 ನಿಮಿಷಗಳವರೆಗೆ ತಡವಾಗುವ ಸಾಧ್ಯತೆಯಿದೆ.
ತಡವಾಗಿ ಸಂಚರಿಸುವ ರೈಲುಗಳ ವಿವರ:
ಎಸ್‌ಎಂವಿಟಿ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್ ವಿಶೇಷ ರೈಲು (08270) ಡಿಸೆಂಬರ್ 22, 24, 27, 29, 31 ಮತ್ತು 2025 ಜನವರಿ 3 ಹಾಗೂ 5ರಂದು ನಿಗದಿತ ಸಮಯಕ್ಕಿಂತ 90 ನಿಮಿಷ ತಡವಾಗಿ ಹೊರಡಲಿದೆ. ಅದೇ ರೈಲು (06270) ಡಿಸೆಂಬರ್ 26 ಮತ್ತು 2025 ಜನವರಿ 2 ರಂದು 30 ನಿಮಿಷ ತಡವಾಗಿ ಸಂಚರಿಸಲಿದೆ.
ಹೊಸ ರೈಲು ಸಂಖ್ಯೆಗಳನ್ನು ಪರಿಚಯ :
2025 ಜನವರಿ 1ರಿಂದ 116 ವಿಶೇಷ ರೈಲುಗಳಿಗೆ ನೈಋತ್ಯ ರೈಲ್ವೆ ನಿಯಮಿತ ಸಂಖ್ಯೆಗಳನ್ನು ನೀಡಲಿದೆ. ಈವರೆಗೆ ‘0’ ಅಂಕೆಯಿಂದ ಪ್ರಾರಂಭವಾಗುತ್ತಿದ್ದ ವಿಶೇಷ ರೈಲುಗಳ ಸಂಖ್ಯೆಗಳು ಇನ್ಮುಂದೆ “5, 6, 7” ಸಂಖ್ಯೆಯಿಂದ ಆರಂಭವಾಗಲಿದೆ. ಪ್ರಯಾಣಿಕರು ಈ ಹೊಸ ಸಂಖ್ಯೆಗಳನ್ನು ನೈಋತ್ಯ ರೈಲ್ವೆಯ ಅಧಿಕೃತ ವೆಬ್‌ಸೈಟ್ (https://swr.indianrailways.gov.in) ಮೂಲಕ ಪರಿಶೀಲಿಸಬಹುದು.
ಸಾಮಾನ್ಯ ರೈಲುಗಳಿಗೆ ಹೊಸ ಅಳವಡಿಕೆ:
ಕೋವಿಡ್ ಸಮಯದಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ರದ್ದುಗೊಂಡಿದ್ದ ವಿಶೇಷ ರೈಲುಗಳು ಪುನಃ ಸಂಚರಿಸಲಾರಂಭಿಸಿವೆ. ಈ ರೈಲುಗಳಿಗೆ ಹೆಚ್ಚು ಟಿಕೆಟ್ ಶುಲ್ಕ ವಸೂಲೆಯಾಗುತ್ತಿದ್ದು, ಪದೇ ಪದೇ ಅವಧಿ ವಿಸ್ತರಣೆ ಮಾಡಬೇಕಾಗಿತ್ತು. ಆದರೆ ಈಗ, ರೈಲುಗಳನ್ನು ನಿಯಮಿತ ರೈಲುಗಳಾಗಿ ಪರಿವರ್ತಿಸಿ ಅವುಗಳ ದರವನ್ನು ಕಡಿಮೆ ಮಾಡಲಾಗಿದೆ.ಇದನ್ನು ಓದಿ –ವೈಕುಂಠ ಏಕಾದಶಿ ವ್ಯವಸ್ಥೆ ಕುರಿತು ಟಿಟಿಡಿ ಇಒ ಪರಿಶೀಲನೆ
ಪ್ರಯಾಣಿಕರಿಗೆ ಮಾಹಿತಿ:
ಹೊಸ ರೈಲು ಸಂಖ್ಯೆ ಮತ್ತು ಸಮಯದ ಕುರಿತು ಸ್ವಲ್ಪ ಗೊಂದಲ ಉಂಟಾಗುವ ಸಾಧ್ಯತೆಯಿದ್ದರೂ, ಹೊಸ ಕ್ರಮದಿಂದ ಮುಂಗಡ ಬುಕ್ಕಿಂಗ್ ಮತ್ತು ಪ್ರಯಾಣ ಸುಲಭವಾಗಲಿದೆ. ಪ್ರಯಾಣಿಕರು ತಮ್ಮ ಬದಲಾವಣೆಗಳನ್ನು ನಿಖರವಾಗಿ ತಿಳಿಯಲು ನೈಋತ್ಯ ರೈಲ್ವೆ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸಲಹೆ ನೀಡಲಾಗಿದೆ.
More Stories
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ರವಿಚಂದ್ರನ್ ಅಶ್ವಿನ್ ದಿಢೀರ್ ವಿದಾಯ
ಎಲ್ಲಾ ಶಾಸಕರ ಕ್ಷೇತ್ರಗಳಿಗೆ ₹2,000 ಕೋಟಿ ಅನುದಾನ: ಸಿಎಂ ಸಿದ್ದರಾಮಯ್ಯ ಘೋಷಣೆ
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ