December 19, 2024

Newsnap Kannada

The World at your finger tips!

sumalatha

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಉಪಯುಕ್ತ ಯೋಜನೆ : ಸಚಿವ ಗೋಪಾಲಯ್ಯ

Spread the love

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಒಳ್ಳೆಯ ಉದ್ದೇಶ ಹೊಂದಿರುವ ಉಪಯುಕ್ತ ಯೋಜನೆಯಾಗಿದೆ. ಆದರೂ ಸಣ್ಣ ಪುಟ್ಟ ನೂನ್ಯತೆಗಳು ಇವೆ ಅವುಗಳನ್ನು ಸರಿಪಡಿಸಲಾಗುವುದು ಎಂದು ಅಬಕಾರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಶನಿವಾರ ತಿಳಿಸಿದರು‌.

ರಾಷ್ಟ್ರೀಯ ಹೆದ್ದಾರಿ ರಸ್ತೆ ಪರಿಶೀಲನೆ ನಡೆಸಿ ಸುದ್ದಿಗಾರರ ಜೊತೆ ಮಾತನಾಡಿ. ಹೆದ್ದಾರಿ ಕಾಮಗಾರಿಯಲ್ಲಿ ಯಾವುದೇ ತೊಂದರೆ ಇಲ್ಲ. ಸರ್ವಿಸ್ ರಸ್ತೆಯಲ್ಲಿ ತೊಂದರೆ ಇದೆ ಅದಕ್ಕೆ ಪರ್ಯಾಯ ವ್ಯವಸ್ಥೆ ಹಾಗೂ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು. ಏಷ್ಯಾ T 20 ಕಪ್ – ಭಾರತಕ್ಕೆ ಮೂರು ಸವಾಲುಗಳು : ನಾಳೆ ಪಾಕ್ ವಿರುದ್ದ ಪಂದ್ಯ

ಮೈಸೂರಿನಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ 118 ಕಿ.ಮೀ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಬೆಂಗಳೂರು ನೈಸ್ ರಸ್ತೆಯಿಂದ ನಿಡಘಟ್ಟದವರೆಗೆ ಹಾಗೂ ನಿಡಘಟ್ಟದಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆಯ ವರೆಗೆ ಎರಡು ಹಂತದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದರು.

sumalatha 1

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಒಂದು ಒಳ್ಳೆಯ ಯೋಜನೆಯಾಗಿದೆ, ಕಾಮಗಾರಿ ಮುಗಿದ ನಂತರ ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ನೈಸ್ ರಸ್ತೆಯಿಂದ ಮೈಸೂರಿಗೆ ತಲುಪುವವರು ಒಂದು ಗಂಟೆ ಹದಿನೈದು ನಿಮಿಷದಲ್ಲಿ ತಲುಪಬಹುದು ಸುಮಾರು ಒಂದು ಮುಕ್ಕಾಲು ಗಂಟೆ ಉಳಿತಾಯವಾಗಲಿದೆ ಎಂದರು.

ಗ್ರಾಮಸ್ಥರು ಕೆಲವು ತೊಂದರೆಗಳ ಬಗ್ಗೆ ಪರಿಶೀಲನೆಯ ಸಂದರ್ಭದಲ್ಲಿ ತಿಳಿಸಿದ್ದಾರೆ.

4 ರಿಂದ 5 ಕಡೆ ಜನರು ಓಡಾಡಲು ಅಂಡರ್ ಪಾಸ್ ರಸ್ತೆ ಅವಶ್ಯಕತೆ ಕಂಡುಬಂದಿದೆ. ಈ ಬಗ್ಗೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆದುಕೊಳ್ಳಲು ತಿಳಿಸಲಾಗಿದೆ. ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತರಲಾಗುವುದು ಎಂದರು. ಮಹಿಳೆ ಮೇಲೆ ಶಾಸಕ ಲಿಂಬಾವಳಿ ದರ್ಪ: ದೂರು ಇಲ್ಲದೇ ಹೋದರೂ ಗಂಟೆಗಟ್ಟಲೇ ಠಾಣೆಯಲ್ಲಿ ಕೂರಿಸಿ ಶಿಕ್ಷೆ

ನಿಡಘಟ್ಟ ಹಾಗೂ ಮದ್ದೂರು ಬಸ್ ಸ್ಟಾಂಡ್ ರಸ್ತೆಯ ಕೆಲವು ನ್ಯೂನತೆ. ಸರ್ವಿಸ್ ರಸ್ತೆಯಲ್ಲಿ ಚರಂಡಿ ವ್ಯವಸ್ಥೆಯ ಬಗ್ಗೆ ಕಾಮಗಾರಿ ಪ್ರಾರಂಭಿಸಿ ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಇದೇ ವೇಳೆ ವಿಧಾನಸಭಾ ಶಾಸಕ ಎಂ.ಶ್ರೀನಿವಾಸ್ ಸಂಸದೆ ಸುಮಲತಾ ಅಂಬರೀಶ್, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ. ಸಿಇಒ ಶಾಂತ ಎಲ್.ಹುಲ್ಮನಿ, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ್, ಉಪವಿಭಾಗಾಧಿಕಾರಿಗಳಾದ ಆರ್.ಐಶ್ವರ್ಯ , ಬಿ.ಸಿ ಶಿವಾನಂದಮೂರ್ತಿ, ತಹಶೀಲ್ದಾರ್ ನರಸಿಂಹಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!