ಬೆಂಗಳೂರು: ನಮ್ಮ ಮೆಟ್ರೋ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ನಿಲ್ದಾಣಗಳಲ್ಲಿಯೇ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ ಅವಕಾಶ ಕಲ್ಪಿಸಿದೆ.
ಈ ಮುಂಚೆ ನಿಗಮದ ವೆಬ್‍ಸೈಟ್ ಅಥವಾ ನಮ್ಮ ಮೆಟ್ರೋ ಆಪ್ ಮೂಲಕ ಸ್ಮಾರ್ಟ್‍ಕಾರ್ಡ್ ರೀಚಾರ್ಜ್ ಮಾಡಿಕೊಳ್ಳಬೇಕಿತ್ತು. ಅದು ಕಾರ್ಡ್ ಬಳಸುವ ಒಂದು ಗಂಟೆ ಮುಂಚೆಯೇ ಆನ್‍ಲೈನ್‍ನಲ್ಲಿ ರೀಚಾರ್ಜ್ ಮಾಡಿಕೊಳ್ಳಬೇಕಿತ್ತು. ಹೊಸ ಸ್ಮಾರ್ಟ್‍ಕಾರ್ಡ್ ಖರೀದಿಸಿದವರಿಗೆ ಮಾತ್ರ ನಿಲ್ದಾಣದಲ್ಲಿಯೇ
ರೀಚಾರ್ಜ್ ಮಾಡಿಕೊಡಲಾಗಿತ್ತು. ಇದರಿಂದ ಮೊದಲೇ ಸ್ಮಾರ್ಟ್‍ಕಾರ್ಡ್ ಹೊಂದಿದ್ದವರಿಗೆ ತೊಂದರೆಯಾಗಿದೆ ಎಂದು ಪ್ರಯಾಣಿಕರು ದೂರು ಸಲ್ಲಿಸಿದ್ದರು. ಪ್ರಯಾಣಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಬೆಂಗಳೂರು ಮೆಟ್ರೋ ರೈಲು ನಿಗಮ, ಮೆಟ್ರೋ ರೈಲು ನಿಲ್ದಾಣಗಳಲ್ಲಿಯೇ ನಿಗಮ ಸ್ಮಾರ್ಟ್‍ಕಾರ್ಡ್ ರೀಚಾರ್ಜ್ ಮಾಡಲು ಅವಕಾಶ ಕಲ್ಪಿಸಿದೆ.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ