ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ನಡೆದಿದ್ದ ವಿದ್ಯಾರ್ಥಿಯೊಬ್ಬನ ಕೊಲೆ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಕೆ.ಜಿ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಕೆ ಮಾಡಿದ್ದ ಪೆನ್ ಚಾಕುವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದ ಆರೋಪಿಗಳು ಪೆನ್ ಚಾಕುವನ್ನು ಆನ್ಲೈನ್ನಿಂದ ಖರೀದಿ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾವಿನ್ಸ್ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ಅರ್ಬಾಜ್ನನ್ನು ಆಗಸ್ಟ್ 11 ರಂದು ನೃತ್ಯ ಮಾಡುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಹತ್ಯೆ ಮಾಡಲಾಗಿತ್ತು.
ಕೊಲೆ ಸಂಬಂಧ ಅರ್ಬಾಜ್ ತಾಯಿ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸಿದ್ದರು.
ಸದ್ಯ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಮೊಹಮದ್ ಸಾದ್ ಅಲಿಯಾಸ್ ಸಾದ್, ಸಫಾನುಲ್ಲಾ ಖಾನ್ ಅಲಿಯಾಸ್ ಸಫಾನ್ (20), ಜೈನುಲ್ಲಾ ಖಾನ್ ಅಲಿಯಾಸ್ ಜೈನ್ (19), ಸೈಯದ್ ಫೈಸಲ್ (19), ಅನಾಸ್ ಖಾನ್ (20) ಹಾಗೂ ಜೈದ್ ಖಾನ್ (19) ಸೇರಿ ಒಟ್ಟು 6 ಮಂದಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಆರೋಪಿ ಮೊಹಮದ್ ಸಾದ್ ಎಚ್.ಬಿ.ಆರ್ ಲೇಔಟ್ ಪ್ರೊವಿನ್ಸ್ ಕಾಲೇಜಿನಲ್ಲಿ ಮೊದಲನೇ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದು, ಆಗಸ್ಟ್ 11 ರಂದು ಪ್ರೊವಿನ್ಸ್ ಕಾಲೇಜಿನಲ್ಲಿ ಕಲ್ಚರಲ್ ಪ್ರೋಗ್ರಾಂನಲ್ಲಿ ಭಾಗಿಯಾಗಿದ್ದ.
ಸಾದ್ ಡಾನ್ಸ್ ಮಾಡ್ತಿದ್ದ ವೇಳೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಚುಡಾಯಿಸಿದ್ದರಂತೆ. ಆಗ ಅರ್ಬಾಜ್ ನೀನು ಕಾಲೇಜಿನ ವಿದ್ಯಾರ್ಥಿಯಲ್ಲ ನೀನು ಏಕೆ ಬಂದಿದ್ದೀಯಾ ಅಂತ ಪ್ರಶ್ನೆ ಮಾಡಿದ್ದನಂತೆ. ಇದರಿಂದ ಸಿಟ್ಟಿಗೆದ್ದ ಸಾದ್ ಮಾರನೇ ದಿನ ತನ್ನ ಜೊತೆ ಏಳು ಮಂದಿ ಕರೆದುಕೊಂಡು ಬಂದಿದ್ದ. ಈ ವೇಳೆ ಗಲಾಟೆ ಅತಿರೇಕಕ್ಕೆ ಹೋಗಿ ಅರ್ಬಾಜ್ ಗೆ ಚಾಕುವಿನಿಂದ ಇರಿಯಲಾಗಿತ್ತು, ಗಂಭೀರವಾಗಿ ಗಾಯಗೊಂಡ ಅರ್ಬಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ